ಕಾಮಧೇನು ಕೆಚ್ಚಲನ್ನ ಕೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

ರಾಮನಗರ: ಕಾಮಧೇನು ಕೆಚ್ಚಲನ್ನ ಕೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಉಳಿದಿದೆ.
ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇರಲ್ಲ. ಕರ್ನಾಟಕ ಕಾಮಧೇನು ರೀತಿ ಇದೆ. ಕಾಮಧೇನು ಕೆಚ್ಚಲನ್ನ ಕೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೆಂಡಕಾರಿದರು.
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಮಾತನಾಡಿದರೂ ದಲಿತ ಸಂಘಟನೆಗಳು ಡಿಕೆಶಿ ವಿರುದ್ಧ ಮಾತನಾಡುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ಭಯ ಬಂದುಬಿಟ್ಟಿದೆ. ಕಾಂಗ್ರೆಸ್ ಏನೇ ಮಾತನಾಡಿದರೂ ಸುಮ್ಮನಿರುತ್ತಾರೆ.
ಕಾಂಗ್ರೆಸ್ ಸುಡುವ ಮನೆ, ಇದರಲ್ಲಿ ಭವಿಷ್ಯ ಇಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ದಲಿತರು ಹೆದರಿಕೊಂಡು ಬದುಕುತ್ತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಯಾರೇ ಮಾತನಾಡಿದರೂ ಧೈರ್ಯವಾಗಿ ವಿರೋಧಿಸಿ. ಯಾವುದೇ ಪಕ್ಷ ಆದರೂ ಸರಿಯೇ ವಿರೋಧಿಸಿ ಎಂದು ಮನವಿ ಮಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?






