ಶೀಘ್ರದಲ್ಲೇ ಸುನಿತಾ ವಿಲಿಯಮ್ಸ್ ಭೂಮಿಗೆ ಬರಲಿರುವ ಬಿಗ್ Update!

ಮಾರ್ಚ್ 6, 2025 - 21:04
 0  14
ಶೀಘ್ರದಲ್ಲೇ ಸುನಿತಾ ವಿಲಿಯಮ್ಸ್ ಭೂಮಿಗೆ ಬರಲಿರುವ ಬಿಗ್ Update!

ಶೀಘ್ರದಲ್ಲೇ ಸುನಿತಾ ವಿಲಿಯಮ್ಸ್ ಭೂಮಿಗೆ ಬರಲಿದ್ದಾರೆ ಎನ್ನುವ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. 

ಬಾಹ್ಯಾಕಾಶದಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ವಿಲ್ಮೋರ್​, ಸ್ಪೇಸ್​ ಎಕ್ಸ್​​ನ ಕ್ರ್ಯೂ10 ನೌಕೆಯು ಮಾರ್ಚ್​ 12 ರಂದು ಭೂಮಿಯಿಂದ ಹೊರಡಲಿದೆ. ಅದಾದ ಒಂದು ಅಥವಾ ಎರಡು ವಾರದಲ್ಲಿ ಆ ನೌಕೆಯು ನಮ್ಮನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆದುಕೊಂಡು ಬರಲಿದೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಸಿಲುಕಿದವರ ವಾಪಸ್​ ಕರೆದುಕೊಂಡು ಬರೋ ವಿಚಾರದಲ್ಲಿ ಹಿಂದಿನ ಬೈಡನ್ ಸರ್ಕಾರ ರಾಜಕೀಯ ಮಾಡಿದೆ. ಹಿಂದಿನ ಬೈಡನ್ ಸರ್ಕಾರ ಅವರು ಬಾಹ್ಯಾಕಾಶದಲ್ಲೇ ಇರುವಂತೆ ನೋಡಿಕೊಂಡಿದೆ ಎಂದು ಟ್ರಂಪ್ ಆರೋಪಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಲ್ಮೋರ್, ನಮ್ಮ ಮರಳುವಿಕೆಯ ಮೇಲೆ ಅಮೆರಿಕ ರಾಜಕೀಯ ಯಾವುದೇ ಪ್ರಭಾರ ಬೀರಿಲ್ಲ. ಸ್ಪೇಸ್​ ಎಕ್ಸ್​ ಕ್ಯಾಪ್ಸೂಲ್ ಬದಲಾವಣೆಯಿಂದಾಗಿ ನಮ್ಮ ಮರಳುವಿಕೆ ಕೊಂಚ ದೂರ ಹೋಗಿದೆ ಎಂದಿದ್ದಾರೆ.

ಈ ಮೂಲಕ ಈ ತಿಂಗಳ ಅಂತ್ಯದ ವೇಳೆಗೆ ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow