Rashmika Mandanna: ಅಮ್ಮನಾಗುವ ಆಸೆ ವ್ಯಕ್ತಪಡಿಸಿದ ನ್ಯಾಷನಲ್ ಕ್ರಶ್! ಮುಂದಿನ ವರ್ಷ ಮದುವೆ ಗುಟ್ಟು ಬಿಚ್ಚಿಟ್ಟ ರಶ್ಮಿಕಾ
ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ತಮ್ಮ ಪರ್ಸನಲ್ ಮತ್ತು ಪ್ರೊಫೆಶನಲ್ ಜೀವನದ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅನೇಕ ಬಾರಿ ರಶ್ಮಿಕಾ ತಮ್ಮ ಬೆರಳಿನಲ್ಲಿ ಎಂಗೇಜ್‌ಮೆಂಟ್ ರಿಂಗ್ ತೋರಿಸಿದರೂ, ಅವರು ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ವಿಜಯ್ ದೇವರಕೊಂಡ ಕೂಡ ಇದೇ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಇವೆ.
ಈ ನಡುವೆ, ರಶ್ಮಿಕಾ ಮಂದಣ್ಣ ಇತ್ತೀಚೆಗೆ ಗುಲ್ಟೆ ಜೊತೆ ನಡೆಸಿದ ಸಂದರ್ಶನದಲ್ಲಿ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ತಾಯಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದು, “ನಾನಿನ್ನೂ ಅಮ್ಮನೇ ಆಗ್ಲಿಲ್ಲ, ಆದರೆ ಮುಂದೆ ಅಮ್ಮನಾಗ್ತೇನೆ ಎಂಬ ವಿಶ್ವಾಸ ಇದೆ. ನನ್ನ ಮಕ್ಕಳ ಮೇಲೆ ನನಗೆ ಅಪಾರ ಪ್ರೀತಿ ಇದೆ. ಅವರ ಸುರಕ್ಷತೆಗೆ ಯಾವ ಮಟ್ಟಿಗಾದರೂ ಹೋಗುತ್ತೇನೆ. ಅದಕ್ಕಾಗಿ ಈಗಲೇ ನನ್ನ ಫಿಟ್ನೆಸ್‌ಗೆ ಗಮನ ಕೊಡುತ್ತಿದ್ದೇನೆ,” ಎಂದು ಹೇಳಿದ್ದಾರೆ.
ಅಲ್ಲದೆ, ಮದುವೆ ಕುರಿತಾಗಿ ಪರೋಕ್ಷವಾಗಿ ಮಾತನಾಡಿದ ರಶ್ಮಿಕಾ, “20 ರಿಂದ 30 ವರ್ಷಗಳ ವಯಸ್ಸು ಕೆಲಸ ಮಾಡಬೇಕಾದ ಕಾಲ. ಈ ಅವಧಿಯಲ್ಲಿ ನಾವು ಜೀವನದ ದಾರಿ ಕಂಡುಕೊಳ್ಳಬೇಕು. 30 ರಿಂದ 40 ವಯಸ್ಸು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಸಮಯ. ಅದಕ್ಕಾಗಿ ನಾನು ಈಗಲೇ ಯೋಜನೆ ಮಾಡಿದ್ದೇನೆ,” ಎಂದಿದ್ದಾರೆ. ರಶ್ಮಿಕಾ ಮಂದಣ್ಣ ಮುಂದಿನ ವರ್ಷ 30ಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆಗಳಿವೆ ಎಂಬ ಸುದ್ದಿ ಪ್ರಸ್ತುತ ಚರ್ಚೆಯಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?