ಮದುವೆ ಬಗ್ಗೆ ಮೌನ ಮುರಿದ ಅನುಷ್ಕಾ ಶೆಟ್ಟಿ: ಪ್ರಭಾಸ್ ಜೊತೆಗೆ ಸಂಬಂಧದ ಬಗ್ಗೆ ಸ್ಪಷ್ಟನೆ

ದಕ್ಷಿಣ ಭಾರತದ 'ಸೂಪರ್ ಲೇಡಿ' ನಟಿ ಅನುಷ್ಕಾ ಶೆಟ್ಟಿ (ಸ್ವೀಟಿ) ತಮ್ಮ ಮದುವೆ ಹಾಗೂ ಪ್ರಭಾಸ್ ಜೊತೆಗಿನ ಸಂಬಂಧದ ಕುರಿತು ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ತೆಲುಗು ಮಾಧ್ಯಮ 'ತೆಲುಗುವನ್' ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಅನುಷ್ಕಾ ಶೆಟ್ಟಿಗೆ ಹಾಗೂ ‘ಬಾಹುಬಲಿ’ ನಟ ಪ್ರಭಾಸ್‌ಗೆ ಸಂಬಂಧಿಸಿದ ಗಾಸಿಪ್‌ಗಳು ವರ್ಷಗಳಾಗಿ ನಡೆಯುತ್ತಲೇ ಇದ್ದರೂ, ಈವರೆಗೆ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೆ ಈ ಬಾರಿ ಅನುಷ್ಕಾ ತಮ್ಮ ಭಾವನೆಗಳನ್ನು ಬಹಿರಂಗಪಡಿಸಿ ಹೇಳಿದರು: “ಮದುವೆ, ಮಕ್ಕಳ ಆಸೆ ನನಗೂ ಇದೆ. ಆದರೆ ನಾನು ಸೂಕ್ಷ್ಮ ಸ್ವಭಾವದವಳು. ನನ್ನ ಎಲ್ಲ ನೋವು-ಭಾವನೆಗಳನ್ನು ಹಂಚಿಕೊಳ್ಳುವ ಸಂಗಾತಿಯ ಹುಡುಕಾಟದಲ್ಲಿದ್ದೇನೆ,” ಎಂದು ಅನಾವರಣ ಮಾಡಿದ್ದಾರೆ.
ಅವರು ಮುಂದುವರೆದು, “ನಾನು ಕುಟುಂಬದ ಜತೆ ಇರುವ ಹೆಣ್ಣು. ನನಗೆ ಅರ್ಥಪೂರ್ಣ ಸಂಬಂಧ ಬೇಕು. ನಾನು ನಟಿ ಆಗಿದ್ದರೂ, ನನ್ನ ಜೀವನದ ಅಡಿಪಾಯ ಪ್ರಾಮಾಣಿಕತೆಯೇ,” ಎಂದು ಹೇಳಿದರು.
ಪ್ರಭಾಸ್ ಬಗ್ಗೆ ಏನು?
“ಪ್ರಭಾಸ್ ಮತ್ತು ನನ್ನ ಜೋಡಿ ಪರದೆಯ ಮೇಲೆ ಚೆನ್ನಾಗಿ ಕಾಣಿಸುತ್ತದೆ. ಆದ್ದರಿಂದ ನಮಿಬ್ಬರ ಹೆಸರು ಪದೇಪದೇ ಕೇಳಿಬರುತ್ತದೆ. ಆದರೆ, ನಮ್ಮಿಬ್ಬರ ನಡುವೆ ಏನಾದರೂ ನಿಜವಾಗಿದ್ದರೆ, ಇಷ್ಟೋತ್ತಿಗಾಗಲೇ ಎಲ್ಲರಿಗೂ ಗೊತ್ತಾಗುತ್ತಿತ್ತು,” ಎಂಬ ಸ್ಪಷ್ಟನೆ ನೀಡಿದ್ದಾರೆ. ಅದನ್ನು ಬೆಂಬಲಿಸಿದಂತೆ, “ನಾವು ನಮ್ಮ ಭಾವನೆಗಳನ್ನು ಮರೆಮಾಡುವವರಲ್ಲ,” ಎಂದು ಅನುಷ್ಕಾ ಮತ್ತಷ್ಟು ಛಂದವಾಗಿ ಹೇಳಿದ್ದಾರೆ.
ಈ ಹಿಂದೆ ಪ್ರಭಾಸ್ ಕೂಡ ಮಾತನಾಡುತ್ತಿದ್ದಾಗ, “ಎರಡು ವರ್ಷಕ್ಕೂ ಹೆಚ್ಚು ಒಬ್ಬರ ಜೊತೆ ಕೆಲಸ ಮಾಡಿದರೆ ಇಂಥ ಗಾಸಿಪ್ ಗೊಳ್ಳುತ್ತವೆ. ಜನ ನಮಗೆ ಒಟ್ಟಾಗಿ ನೋಡಲು ಇಚ್ಛಿಸುತ್ತಾರೆ, ಆದರೆ ಸಿನಿಮಾ ಜೀವನಕ್ಕೂ ವೈಯಕ್ತಿಕ ಜೀವನಕ್ಕೂ ತಾರತಮ್ಯವಿದೆ,” ಎಂದು ಪ್ರತಿಕ್ರಿಯೆ ನೀಡಿದ್ದರು.
ಫ್ಯಾನ್ಸ್ ನಿರೀಕ್ಷೆ
ಅನುಷ್ಕಾ ಮತ್ತು ಪ್ರಭಾಸ್ ಜೋಡಿ ಪರದೆಯ ಮೇಲೆ ಕ್ರೇಜ್ ಹೊಂದಿದ್ದು, ಅಭಿಮಾನಿಗಳು ನಿಜ ಜೀವನದಲ್ಲಿಯೂ ಜೋಡಿಯಾಗಲಿ ಎಂಬ ಆಶೆ ಇಟ್ಟಿದ್ದಾರೆ. ಆದರೆ ಇಬ್ಬರೂ ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕು ವಿಭಿನ್ನವೆಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






