ಭಾನುವಾರ ಅಪ್ಪಿತಪ್ಪಿಯೂ ಇವುಗಳನ್ನು ಖರೀದಿಸಬೇಡಿ: ಬಡವರಾಗ್ತಾರಂತೆ!

ಹಿಂದೂ ಧರ್ಮದಲ್ಲಿ ಒಂದೊಂದು ವಿಶೇಷ ದಿನದ ಬಗ್ಗೆ ಹೇಳಲಾಗಿದೆ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಭಾನುವಾರವೂ ವಿಶೇಷವಾಗಿದೆ. ಈ ದಿನದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತೆ. ಭಾನುವಾರ ಯಾವ ಕೆಲಸ ಮಾಡೋದನ್ನು ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳೋಣ.
ನೀವು ಭಾನುವಾರದಂದು ಮಾಡುವ ಕೆಲಸದಿಂದ ಅಥವಾ ಶಾಪಿಂಗ್ನಿಂದ ನಿಮ್ಮನ್ನು ಬಡವರನ್ನಾಗಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ..? ಹಿಂದೂ ಧರ್ಮದಲ್ಲಿ, ಭಾನುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭಾನುವಾರದಂದು ಈ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಬಡತನಕ್ಕೆ ಕಾರಣವಾಗುವ ಆ ಕಾರ್ಯಗಳು ಯಾವುವು ಎಂದು ತಿಳಿಯೋಣ..
ಭಾನುವಾರವು ಭಗವಾನ್ ಸೂರ್ಯ ದೇವನ ದಿನವಾಗಿದೆ. ಈ ದಿನ ಮಾಡಿದ ಕೆಲಸವು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ವ್ಯಕ್ತಿಯ ಜಾತಕದಲ್ಲಿ ಸೂರ್ಯ ದೋಷವಿದ್ದಾಗ ಆ ವ್ಯಕ್ತಿಯು ಎಲ್ಲಾ ಕಡೆಗಳಿಂದ ಅಶುಭ ಫಲ ಅಥವಾ ಕೆಟ್ಟ ಫಲಿತಾಂಶಗಳನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ಭಾನುವಾರದಂದು ಅವುಗಳನ್ನು ಮಾಡುವುದನ್ನು ತಪ್ಪಿಸುವುದು ಮುಖ್ಯ.
1. ಭಾನುವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ:
- ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳ ಖರೀದಿಯನ್ನು ಭಾನುವಾರ ನಿಷೇಧಿಸಲಾಗಿದೆ. ಈ ದಿನ ಹಣವನ್ನು ಖರ್ಚು ಮಾಡುವುದರಿಂದ ಲಕ್ಷ್ಮಿ ದೇವಿಯು ಕೂಡ ಕೋಪಗೊಳ್ಳಬಹುದು.
- ಕಾರ್ ಬಿಡಿಭಾಗಗಳು, ಹಾರ್ಡ್ವೇರ್ ವಸ್ತುಗಳನ್ನು, ತೋಟಗಾರಿಕೆ ಉಪಕರಣಗಳನ್ನು, ಪೀಠೋಪಕರಣಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಸೇರಿದಂತೆ ಇನ್ನಿತರ ವಸ್ತುಗಳನ್ನು ಈ ದಿನ ಖರೀದಿಸಬಾರದು ಎನ್ನುವ ನಂಬಿಕೆಯಿದೆ.
2. ಭಾನುವಾರದಂದು ಈ ಕೆಲಸ ಮಾಡಬೇಡಿ:
- ಭಾನುವಾರದಂದು ಉಪ್ಪನ್ನು ಸೇವಿಸಬೇಡಿ. ಹೀಗೆ ಮಾಡುವುದರಿಂದ ಸೂರ್ಯದೇವನಿಂದ ಕೆಟ್ಟ ಪರಿಣಾಮ ಉಂಟಾಗಿ ಕೆಲಸಗಳಿಗೆ ಅಡ್ಡಿಯಾಗುತ್ತದೆ
ಮಾಂಸ ಮತ್ತು ಮದ್ಯ ಸೇವನೆಯನ್ನು ಸಹ ನಿಷೇಧಿಸಲಾಗಿದೆ.
ಭಾನುವಾರದಂದು ಶನಿಗೆ ಸಂಬಂಧಿಸಿದ ವಿಷಯಗಳನ್ನು ತಪ್ಪಿಸಬೇಕು.
ಕಪ್ಪು, ನೀಲಿ, ಕಂದು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
ಈ ದಿನ ಕೂದಲನ್ನು ಕತ್ತರಿಸಬಾರದು, ಇದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ.
3. ಭಾನುವಾರದಂದು ಈ ವಸ್ತುಗಳನ್ನು ಖರೀದಿಸುವುದು ಅದೃಷ್ಟ:
- ಪರ್ಸ್ ಅಥವಾ ವಾಲೆಟ್
- ಕತ್ತರಿ
- ಗೋಧಿ
- ಕೆಂಪು ಬಣ್ಣದ ವಸ್ತುಗಳು.
ಭಾನುವಾರದಂದು ರಜೆ ಇದ್ದಾಗ ನಾವು ಹೆಚ್ಚಾಗಿ ಶಾಪಿಂಗ್ನ್ನು ಅಥವಾ ಇತರೆ ವಸ್ತುಗಳನ್ನು ಖರೀದಿಸಲು ಹೋಗುತ್ತೇವೆ. ಆದರೆ, ಈ ದಿನದಂದು ಯಾವೆಲ್ಲಾ ವಸ್ತುಗಳನ್ನು ಖರೀದಿಸಬೇಕು..? ಯಾವೆಲ್ಲಾ ವಸ್ತುಗಳನ್ನು ಖರೀದಿಸಬಾರದು..? ಎನ್ನುವುದರ ಬಗ್ಗೆ ತಿಳಿದುಕೊಂಡಿರಲ್ಲವೇ..? ಅದೆ ರೀತಿ ನೀವು ಕೂಡ ಭಾನುವಾರ ದುರಾದೃಷ್ಟ ತರುವ ವಸ್ತುಗಳನ್ನು ಖರೀದಿಸದಿರಿ.
ನಿಮ್ಮ ಪ್ರತಿಕ್ರಿಯೆ ಏನು?






