ಮದುವೆಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ 15 ದಿನಗಳ ಪೆರೋಲ್: ಹೈಕೋರ್ಟ್ ಆದೇಶ

ಜುಲೈ 13, 2025 - 22:11
ಜುಲೈ 13, 2025 - 17:28
 0  7
ಮದುವೆಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ 15 ದಿನಗಳ ಪೆರೋಲ್: ಹೈಕೋರ್ಟ್ ಆದೇಶ

ತಿರುವನಂತಪುರಂ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಯೊಬ್ಬನ ಮದುವೆಗಾಗಿ ಕೇರಳ ಹೈಕೋರ್ಟ್ 15 ದಿನಗಳ ಪೆರೋಲ್ ಮಂಜೂರು ಮಾಡಿದ ಘಟನೆ ರಾಜ್ಯದ ನ್ಯಾಯಾಂಗ ವಲಯದಲ್ಲಿ ಗಮನ ಸೆಳೆದಿದೆ.

ಪ್ರಶಾಂತ್ ಎಂಬ ಅಪರಾಧಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವಾಗಲೇ ಮದುವೆ ನಿಶ್ಚಯವಾಗಿದ್ದು, ಜುಲೈ 13ರಂದು ಮದುವೆ ನಡೆಯಲಿದ್ದುಕಂಡು, ಅಪರಾಧಿಯ ತಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುನ್ನಿಕೃಷ್ಣನ್ ಅವರ ನೇತೃತ್ವದ ಪೀಠ, ಜುಲೈ 12 ರಿಂದ 15 ದಿನಗಳ ಪೆರೋಲ್ ನೀಡುವಂತೆ ಆದೇಶ ನೀಡಿದೆ.

ಪೆರೋಲ್ ಅವಧಿ ಮುಗಿದ ಬಳಿಕ ಜುಲೈ 26 ಸಂಜೆ 4 ಗಂಟೆಗೆ ಜೈಲಿಗೆ ಹಿಂತಿರುಗಬೇಕು ಎಂಬ ಸ್ಪಷ್ಟ ಸೂಚನೆಯನ್ನು ಕೋರ್ಟ್ ನೀಡಿದೆ. ಈಗಾಗಲೇ ಅಪರಾಧಿಯ ಪೆರೋಲ್ ಅರ್ಜಿಯನ್ನು ವಿಯ್ಯರು ಜೈಲಿನ ಅಧೀಕ್ಷಕರು ವಜಾಗೊಳಿಸಿದ್ದರು, ಇದನ್ನು ಪ್ರಶ್ನಿಸಿ ಪ್ರಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದ.

ವಿಶೇಷವೆಂದರೆ, ಅಪರಾಧಿಯು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೂ ಕೂಡ ಆಕೆ ಆತನೊಂದಿಗೆ ಮದುವೆಯಾಗಲು ಇಚ್ಛೆ ವ್ಯಕ್ತಪಡಿಸಿದ್ದಾಳೆ. ಅವಳ ಧೈರ್ಯ ಮತ್ತು ಪ್ರೀತಿಯ ಮೌಲ್ಯವನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡು ಪೆರೋಲ್ ಮಂಜೂರು ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ನ್ಯಾಯಾಲಯವು ಪೆರೋಲ್ ಅನ್ನು ಭಾರತ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ನೀಡಿದ್ದು, ನವಜೋಡಿಗೆ ಸುಖಮಯ ದಾಂಪತ್ಯದ ಆಶೀರ್ವಾದವನ್ನೂ ಹಾರೈಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow