2026ಕ್ಕೆ₹500 ನೋಟುಗಳುಬ್ಯಾನ್ ಆಗುತ್ತಾ..? ವೈರಲ್ ಸುದ್ದಿಗೆ ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಹೀಗಿದೆ..!

ದಿನೇ ದಿನೇ ಅಭಿವೃದ್ಧಿಯಾಗಿರುತ್ತಿರುವ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಂಚಕರು, ಸರ್ಕಾರಕ್ಕೆ ಮತ್ತು ಜನರಿಗೆ ಸವಾಲೊಡ್ಡುತ್ತಿದ್ದಾರೆ. ಒಂದೆಡೆ, ಸೈಬರ್ ವಂಚಕರು ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ. ಮತ್ತೊಂದೆಡೆ, ನಕಲಿ ನೋಟುಗಳು ಜನರ ಜೇಬಿಗಿಳಿಸಿ ವಂಚಿಸುವ ಪ್ರಯತ್ನ ನಡೆಯುತ್ತಿದೆ.
ಅದಲ್ಲದೆ 2026ರ ವೇಳೆಗೆ 500 ರೂಪಾಯಿ ನೋಟುಗಳು ಬ್ಯಾನ್ ಆಗಲಿವೆ ಎಂಬ ವೈರಲ್ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, 500 ರೂಪಾಯಿ ನೋಟುಗಳು ಕಾನೂನುಬದ್ಧ ಚಲಾವಣೆಯಲ್ಲಿ ಉಳಿಯಲಿವೆ ಎಂದು ಸ್ಪಷ್ಟಪಡಿಸಿವೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಈ ಬಗ್ಗೆ ಅಧಿಕೃತ ಸತ್ಯ-ಪರಿಶೀಲನೆ ನಡೆಸಿ, ಈ ವಿಷಯ ಸುಳ್ಳು ಎಂದು ದೃಢಪಡಿಸಿದೆ.
ಜೂನ್ 2, 2025 ರಂದು ‘ಕ್ಯಾಪಿಟಲ್ ಟಿವಿ’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಆದ ಸುಮಾರು 12 ನಿಮಿಷಗಳ ವೀಡಿಯೊದಲ್ಲಿ, 2026ರ ಮಾರ್ಚ್ನಿಂದ 500 ರೂಪಾಯಿ ನೋಟುಗಳು ಹಂತಹಂತವಾಗಿ ರದ್ದಾಗಲಿವೆ ಎಂದು ಮಾಡಲಾಗಿದೆ.
ಈ ವೀಡಿಯೊ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ, PIB ಈ ದಾವೆಯನ್ನು ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿದ್ದು, RBI ಯಾವುದೇ ಇಂತಹ ಘೋಷಣೆಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. 500 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಕಾನೂನುಬದ್ಧವಾಗಿರುತ್ತವೆ ಎಂದು PIB ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






