ಫೇಸ್ ಬುಕ್ʼನಲ್ಲಿ ಪ್ರೇಮಾಂಕುರ: ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆ!

ಜನವರಿ 9, 2025 - 22:19
 0  8
ಫೇಸ್ ಬುಕ್ʼನಲ್ಲಿ ಪ್ರೇಮಾಂಕುರ: ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆ!

ಕೆಲವೊಂದು ಸಂಬಂಧಗಳು ವಿಚಿತ್ರವೆನ್ನಿಸುತ್ತವೆ. ಅವುಗಳ ಬಗ್ಗೆ ತರ್ಕ ಮಾಡ್ತಾ ಹೋದ್ರೆ ಕೊನೆ ಸಿಗೋದು ಕಷ್ಟ. ಮನೆ, ಸಂಸಾರ, ಮಕ್ಕಳಾದ್ಮೇಲೂ ವಯಸ್ಸಾದ ಮಹಿಳೆಯರು ಇನ್ನೊಬ್ಬರ ಜೊತೆ ಓಡಿ ಹೋಗೋದಿದೆ. ಪತಿ ಜೊತೆ ಸುಖ ಸಂಸಾರ ಮಾಡ್ತಿದ್ದಾಳೆ ಅಂತಾ ನೋಡಿದೋರು ಅಂದುಕೊಂಡಿರ್ತಾರೆ. ಆದ್ರೆ ಪತ್ನಿ ಮನಸ್ಸು ಮತ್ತೆಲ್ಲೋ ಓಡಿರುತ್ತೆ.

ಇಡೀ ದಿನ ಮನೆ, ಮಕ್ಕಳನ್ನು ನೋಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಅದೆಷ್ಟೊ ಮಹಿಳೆಯರು ಹೊಸ ಪ್ರೀತಿ ಅರಸಿ ಹೋಗ್ತಾರೆ. ಕೆಲವರು ಪತಿಗೆ ತಿಳಿಯದೆ ನಿರಂತರ ಮೋಸ ಮಾಡಿದ್ರೆ ಮತ್ತೆ ಕೆಲವರು ಎಲ್ಲ ಬಿಟ್ಟು ಪ್ರೇಮಿ ಜೊತೆ ಓಡಿ ಹೋಗ್ತಾರೆ. ಈಗ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಗಂಡನ ಮನೆ ಲುಟಿ ಮಾಡಿ ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ನೇಹಿತನೊಂದಿಗೆ ಓಡಿ ಹೋಗಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಪತ್ನಿ ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಿಯಕರನೇ ತನ್ನ ಪತ್ನಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪಿಸಿ ಕರೆದೊಯ್ದಿದ್ದಾನೆ ಎಂದೂ ಪತಿ ಹೇಳಿಕೊಂಡಿದ್ದಾನೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮಹಿಳೆ ಅಬಿರಾಲ್, 2017 ರಲ್ಲಿ ಪಂಜಾಬ್‌ನ ಮೊಹಾಲಿಯ ವಿನೋದ್ ಕುಮಾರ್ ಅವರನ್ನು ವಿವಾಹವಾದರು. ಆದರೆ, ನಂತರ ಅವರು ರಾಯ್ ಬರೇಲಿಯ ಫೈಜಾನ್ ಅಹ್ಮದ್​ನೊಂದಿಗೆ ರಿಲೇಷನ್​ಶಿಪ್​ನಲ್ಲಿದ್ದಳು.

ಡಿಸೆಂಬರ್ 2024 ರಲ್ಲಿ, ಅಬಿರಾಲ್ ತನ್ನ ಪತಿಯನ್ನು ತೊರೆದು ತನ್ನ ಪ್ರೇಮಿ ಅಹ್ಮದ್ ಭೇಟಿಯಾಗಿ, ಎರಡು ದಿನಗಳ ಬಳಿಕ ಮದುವೆಯಾಗಿದ್ದಳು. ಮದುವೆ ವಿಚಾರ ತಿಳಿದ ಪತಿ ರಾಯ್ ಬರೇಲಿ ಪೊಲೀಸರಿಗೆ ದೂರು ನೀಡಿದ್ದರು. ಅಹ್ಮದ್ ತನ್ನ ಪತ್ನಿಯನ್ನು ದಾರಿತಪ್ಪಿಸಿದ್ದಾನೆ, ಆಕೆ ಹೋಗುವಾಗ 5 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್​ಗಳನ್ನು ಕದ್ದುಹೋಗಿದ್ದಾಳೆ ಎಂದು ಹೇಳಿದ್ದಾರೆ. ಮಹಿಳೆ ತನ್ನ ಪ್ರೇಮಿಯೊಂದಿಗೆ ಇರಲು ಬಯಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿವಕಾಂತ್ ಪಾಂಡೆ ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow