ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳ: ಇಡಿ ವಿಚಾರಣೆಯ ಸ್ಪೋಟಕ ಮಾಹಿತಿ ಬಹಿರಂಗ!

ಮಂಗಳೂರು: 2022ರ ನವೆಂಬರ್ 19ರಂದು ಮಂಗಳೂರು ಕಂಕನಾಡಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ED ಮಹತ್ವದ ಮಾಹಿತಿಗಳನ್ನು ಹೊರಬಿಟ್ಟಿದೆ. ಸ್ಪೋಟದಲ್ಲಿ ಇಡೀ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಲು ಉಗ್ರರು ಯೋಜನೆ ಹಾಕಿಕೊಂಡಿದ್ದರು ಎಂಬುದೂ ಬೆಳಕಿಗೆ ಬಂದಿದೆ.
ಸ್ಫೋಟದಲ್ಲಿ ಪ್ರಮುಖ ಆರೋಪಿ ಸಯ್ಯದ್ ಯಾಸಿನ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ರೂ. 29,000 ಅನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡೀ ಮುಟ್ಟುಗೋಲು ಹಾಕಿಕೊಂಡಿದೆ. ಆರೋಪಿ ಮುನೀರ್, ಇಸ್ಲಾಮಿಕ್ ಸ್ಟೇಟ್ (ಐಸಿಸ್) ಆನ್ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸುತ್ತಿದ್ದ ಹಣವನ್ನು ಮೊಹಮ್ಮದ್ ಶಾರೀಕ್‌ಗೆ ತಲುಪಿಸಲು ಅನಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡುತ್ತಿದ್ದನು ಎಂಬ ಅಂಶ ಕೂಡಾ ಇಡಿ ತನಿಖೆಯಲ್ಲಿ ಬಹಿರಂಗವಾಗಿದೆ.
ಧರ್ಮಸ್ಥಳ ದೇವಾಲಯದಲ್ಲಿಯೇ ಬಾಂಬ್ ಸ್ಪೋಟಗೊಳಿಸಲು ಆರೋಪಿಗಳು ಪ್ಲಾನ್ ಮಾಡಿದ್ದು, ಆಟೋದಲ್ಲಿ ಬಾಂಬ್ ಕೊಂಡೊಯ್ಯಲಾಗುತ್ತಿತ್ತು. ಆದರೆ, ಟೈಮರ್ ಅನ್ನು ತಪ್ಪಾಗಿ 90 ನಿಮಿಷದ ಬದಲು 9 ಸೆಕೆಂಡಿಗೆ ಸೆಟ್ ಮಾಡಿರುವ ದೋಷದಿಂದಾಗಿ ಆಟೋರಿಕ್ಷಾದೊಳಗೆಯೇ ಸ್ಪೋಟವಾಗಿದೆ.
ಸ್ಫೋಟವು 2022ರ ನವೆಂಬರ್ 19ರಂದು ಸಂಜೆ 4.40ಕ್ಕೆ, ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆಟೋಚಾಲಕ ಪುರುಷೋತ್ತಮ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರರ ವಿಚಾರಣೆ ಮುಂದುವರೆದಿದ್ದು, ಮತ್ತಷ್ಟು ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






