ಅಂಕಲ್ ನೀವು ಕರ್ನಾಟಕದ ಕ್ರಷ್: ಜಗ್ಗು ಅಂಕಲ್ ಜನತೆಯ ಸ್ವೀಟ್ ಮೆಸೇಜ್!

ಅಕ್ಟೋಬರ್ 13, 2024 - 11:59
 0  15
ಅಂಕಲ್ ನೀವು ಕರ್ನಾಟಕದ ಕ್ರಷ್: ಜಗ್ಗು ಅಂಕಲ್ ಜನತೆಯ ಸ್ವೀಟ್ ಮೆಸೇಜ್!

ಬಿಗ್ ಬಾಸ್ ಸೀಸನ್ 11 ರ  ವಾರದ ಕಥೆ ಕಿಚ್ಚನ ಜೊತೆ ಎರಡನೇ ವಾರದ ಎಪಿಸೋಡ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಆಟಕ್ಕೆ ತಕ್ಕಂತೆ ಗಿಫ್ಟ್ ಸಿಕ್ಕಿದೆ. ಜನರು ಕಳ್ಸಿರೋ ಗಿಫ್ಟ್ ಕಂಡು ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿ ಮನೆ ನಿಭಾಯಿಸುವಲ್ಲಿ ಎಡವಿದ ಹಂಸಗೆ ಮಿದುಳಿನ ಫೋಟೋ ಗಿಫ್ಟ್ ಸಿಕ್ಕಿದೆ. ಇದರರ್ಥ ಬುದ್ದಿ ಉಪಯೋಗಿಸಿ ಎನ್ನುವಂತಿದೆ.

ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ನಕ್ಕು ನಲಿಸಿದ ಕಾಮಿಡಿಯನ್ ಧನರಾಜ್ಗೆ ಸೈಕಲ್ ಪಂಪ್ ಗಿಫ್ಟ್ ಬಂದಿದೆ. ಇದರ ಅರ್ಥ ಗಾಡಿ ಪಂಚರ್ ಆಗಿದೆ. ಪಂಪ್ ಹಾಕಿ ಓಡಿಸಿ ಎನ್ನುವಂತಿದೆ. ಭವ್ಯ ಗೌಡಗೆ ಕ್ಯಾಲ್ಕುಲೇಟರ್ ಗಿಫ್ಟ್ ಸಿಕ್ಕಿದ್ದು, ಲೆಕ್ಕಾಚಾರ ಹಾಕಿ ಆಟ ಆಡಿದ್ರೆ ಕಳೆದು ಹೋಗ್ತೀರಾ ಎಂದು ಬರೆಯಲಾಗಿದೆ. ಜಗದೀಶ್​ಗೆ ಜನ ಕಳುಹಿಸಿದ ಮೆಸೇಜ್ ಏನು?

ಲಾಯರ್ ಜಗದೀಶ್​ ಅವರಿಗೆ ಜನರು ಹಾರ್ಟ್​ ಶೇಪ್​ ಲೆಟರ್​ ಕಳಿಸಿದ್ದು, ಅದರ ಮೇಲೆ ಕ್ರಶ್ ಆಫ್ ಕರ್ನಾಟಕ ಎಂದು ಬರೆದಿದೆ. ಜೊತೆಗೆ ರೆಡ್​ ಕಲರ್ ಬನಿಯನ್ ಕೂಡ ಕಳುಹಿಸಿದ್ದಾರೆ. ಹೊರಗೆ ವಿವಾದಗಳಿಂದ ಸದ್ದು ಮಾಡಿದ್ರಿ, ಒಳಗೆ ಚೆನ್ನಾಗಿ ಆಡಿ ನಿಮ್ಮ ಜೊತೆ ನಾವಿದ್ದೇವೆ ಜಗ್ಗಿ ಅಂಕಲ್ ಎಂದು ಬರೆದಿದ್ದಾರೆ.

ತ್ರಿವಿಕ್ರಮ್ಗೆ ವಿಶ್ಯೂಲ್ ಗಿಫ್ಟ್ ಸಿಕ್ಕಿದ್ದು, ಸಿಕ್ಕಾಪಟ್ಟೆ ಸದ್ದು ಮಾಡ್ತೀರಾ ಅಂತ ಅನ್ಕೊಂಡಷ್ಟು ಸೌಂಡ್ ಬರ್ತಿಲ್ಲ ಎಂಬ ಮೆಸೇಜ್ ತಲುಪಿದೆ. ಉರೀತಾ ಇದ್ದ ಫೈಯರ್ ಬ್ರ್ಯಾಂಡ್ ಈಗ ಹಾರಿ ಹೋಗಿದೆ. ಹತ್ಕೊಳುತ್ತೆ ಬೆಂಕಿ, ಹತ್ತಿಸ್ತೀನಿ ಅಂತ ಚೈತ್ರಾ ಕುಂದಾಪುರ ಹೇಳಿದ್ರು. ಸುದೀಪ್​ ಮಾತುಗಳನ್ನು ಕೇಳಿ ಭವ್ಯ ಗೌಡ ಕಣ್ಣೀರು ಹಾಕಿದ್ದಾರೆ. ಯಾಕೆ ಈ ಕಣ್ಣೀರು ಎಂದು ಸುದೀಪ್​ ಕೇಳಿದ್ರು. ಕೆಲವೊಮ್ಮೆ ನನ್ನ ನಿರ್ಧಾರದ ವಿಚಾರಕ್ಕೆ ಬೇಸರವಾಗಿದೆ ಎಂದು ಭವ್ಯ ಹೇಳಿದ್ರು. ಮನೆ ಮಂದಿಗೆಲ್ಲಾ ಕಿಚ್ಚ ಸುದೀಪ್ ಪ್ರಾಮಾಣಿಕತೆಯ ಪಾಠ ಮಾಡಿದ್ದಾರೆ.

ಗೌತಮಿಗೆ ಮುಖವಾಡ ಗಿಫ್ಟ್ ಸಿಕ್ಕಿದ್ದು, ಮುಖವಾಡ ತೆಗೆದು ನಿಜವಾದ ಆಟಕ್ಕೆ ಯಾವಾಗ ಇಳೀತೀರಾ ಎನ್ನುವ ಮೆಸೇಜ್ ಬಂದಿದೆ. ನಿಮ್ಮ ಸತ್ಯ ಹೊರಗೆ ಬರ್ತಿಲ್ಲ ಎಂದು ಕಿಚ್ಚ ಹೇಳ್ತಿದ್ದಂತೆ ಗೌತಮಿ ಕಣ್ಣಲ್ಲಿ ನೀರು ತುಂಬಿತ್ತು ಆಟಕ್ಕೆ ತಕ್ಕಂತೆ ಸ್ಪರ್ಧಿಗಳಿಗೆ ಸಿಕ್ಕಿರುವ ಗಿಫ್ಟ್ ಆಟಗಾರರನ್ನು ಗುರಿ ತಲುಪಿಸುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow