ಇಂದು RCB Vs ಲಕ್ನೋ ಮ್ಯಾಚ್.. ಬಲಿಷ್ಠ ಬೆಂಗಳೂರು ತಂಡದಲ್ಲಿ ಯಾರಿಗೆಲ್ಲಾ ಸ್ಥಾನ!

ಮೇ 27, 2025 - 10:37
 0  14
ಇಂದು RCB Vs ಲಕ್ನೋ ಮ್ಯಾಚ್.. ಬಲಿಷ್ಠ ಬೆಂಗಳೂರು ತಂಡದಲ್ಲಿ ಯಾರಿಗೆಲ್ಲಾ ಸ್ಥಾನ!

ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಆರ್​ಸಿಬಿ ಮತ್ತು ಎಲ್​ಎಸ್​​ಜಿ ನಡುವೆ ನಡೆಯಲಿದೆ. ಇಂದಿನ ಪಂದ್ಯವು ಆರ್​ಸಿಬಿ ಪಾಲಿಗೆ ತುಂಬಾನೇ ಮಹತ್ವದ್ದಾಗಿದೆ. ಈಗಾಗಲೇ ಪಾಯಿಂಟ್ಸ್​ ಟೇಬಲ್​​ನಲ್ಲಿ ಮೂರನೇ ಸ್ಥಾನದಲ್ಲಿರುವ ಆರ್​ಸಿಬಿ, ಹಿನ್ನಡೆ ಅನುಭವಿಸಿದೆ.

ನಡೆಯಲಿರುವ ಪಂದ್ಯವನ್ನು ಗೆದ್ದರೆ ಮಾತ್ರ ಪಾಯಿಂಟ್ಸ್​ ಟೇಬಲ್​​ನಲ್ಲಿ ಮೊದಲ ಎರಡು ಸ್ಲಾಟ್​ಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸುವ ಅವಕಾಶ ಇದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯವು ಆರ್​ಸಿಬಿಗೆ ಮಾಡು, ಇಲ್ಲವೇ ಮಡಿ ಆಗಿದೆ.
ಇದರ ಮಧ್ಯೆ ಆರ್​ಸಿಬಿಗೆ ಆಟಗಾರರ ಅಲಭ್ಯತೆ ಎದುರಾಗಿದೆ. ಈಗಾಗಲೇ ಜೊಕೊಬ್ ಬೆಥೆಲ್, ಲುಂಗಿ ಎನ್​ಗಿಡಿ ಅವರು ಆರ್​ಸಿಬಿ ಕ್ಯಾಂಪ್ ತೊರೆದಿದ್ದಾರೆ. ಬೆಥೆಲ್ ಸ್ಥಾನದಲ್ಲಿ ಫಿಲ್ ಸಾಲ್ಟ್​ ಇದ್ದಾರೆ. ಲುಂಗಿ ಎನ್​ಗಿಡಿ ಪ್ಲೇಸ್​​ಗೆ ಆರ್​ಸಿಬಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಸಂಭಾವ್ಯ ಆರ್​ಸಿಬಿ ಟೀಂ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೆವಿಡ್, ರೊಮಾರಿಯೋ ಶೆಫಾರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್​ವುಡ್

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow