ಜೋರಾಯ್ತು IPL ಪ್ಲೇ ಆಫ್ ಲೆಕ್ಕಾಚಾರ.. ಸೀಸನ್ 18 ರಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತಾ RCB?

ಮೇ 20, 2025 - 09:04
 0  13
ಜೋರಾಯ್ತು IPL ಪ್ಲೇ ಆಫ್ ಲೆಕ್ಕಾಚಾರ.. ಸೀಸನ್ 18 ರಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತಾ RCB?

ಇಂಡಿಯನ್ ಪ್ರಿಮೀಯರ್ ಲೀಗ್​ ಪ್ಲೇ ಆಫ್ ರೇಸ್ ಜೋರಾಗಿ ನಡೀತಿದೆ. ಅಂಕಪಟ್ಟಿಯಲ್ಲಿರುವ ಟಾಪ್​​-5 ಟೀಮ್​​​​​​​ಗಳಲ್ಲಿ ಯಾರಿಗೆ ಯಾವ ಸ್ಥಾನ ಅನ್ನೋದು ಮಾತ್ರವೇ ಫೈನಲ್ ಆಗಬೇಕಿದೆ. 12ರ ಪೈಕಿ 8 ಮ್ಯಾಚ್​ ಗೆದ್ದಿರುವ ಆರ್​​ಸಿಬಿಯ ಪ್ಲೇ ಆಫ್ ಸ್ಥಾನವೂ ಫಿಕ್ಸಾಗಿದೆ. ಆದ್ರೂ, ಕೊಲ್ಕತ್ತಾ ನೈಟ್​ ರೈಡರ್ಸ್ ಎದುರಿನ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆತಂಕ ಹುಟ್ಟು ಹಾಕಿದೆ., 

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯದ ಓಟ, ಆಟಗಾರರ ಫಾರ್ಮ್​ ಎಲ್ಲಾ ಸಾಲಿಡ್​ ಆಗಿದೆ. ಹೀಗಾಗಿ ಆರ್​ಸಿಬಿ ಕಪ್​ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ಆರ್​ಸಿಬಿ ಆಟಗಾರರ ಆಟ ನೋಡಿದ ಅಭಿಮಾನಿಗಳ ಖುಷಿಗಂತೂ ಪಾರವೇ ಇಲ್ಲದಂತಾಗಿದೆ. ಆದ್ರೀಗ, ಕೊಲ್ಕತ್ತಾ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರೋದು ಹೊಸ ಟೆನ್ಶನ್ ತಂದಿಟ್ಟಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಕೊಲ್ಕತ್ತಾ ಎದುರಿನ ಪಂದ್ಯ ಮಳೆಗಾಹುತಿಯಾಗಿದೆ. ಪಂದ್ಯ ರದ್ದಾಗಿ ಒಂದು ಪಾಯಿಂಟ್​​ ಸಿಕ್ಕು ಸದ್ಯ ಆರ್​ಸಿಬಿ ಸೇಫ್​ ಆಗಿದೆ. ಹಾಗಿದ್ರೂ, 2021ರ ಐಪಿಎಲ್​ ಕರಾಳ ನೆನಪು ಅಭಿಮಾನಿಗಳನ್ನ ಕಾಡಲಾರಂಭಿಸಿದೆ., 

ಈ ಟೂರ್ನಿಯಲ್ಲಿ ಆರ್​ಸಿಬಿ, ಸತತ 4 ಗೆಲುವುಗಳೊಂದಿಗೆ ಅದ್ಭುತ ಆರಂಭ ಪಡೆದಿತ್ತು. 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದ್ದ ಆರ್​ಸಿಬಿ, ಟೇಬಲ್ ಟಾಪರ್ ಆಗಿ ಮೆರೆದಾಡಿತ್ತು. ಆದ್ರೆ, ಹೆಮ್ಮಾರಿ ಕೋವಿಡ್​ನಿಂದಾಗಿ ಟೂರ್ನಿ ಮುಂದೂಡಿಕೆಯಾಯ್ತು. ಆ ಬಳಿಕ ಟೂರ್ನಿ ಯುಎಇನಲ್ಲಿ ನಡೀತು. ಆದ್ರೆ, ಮೂಮೆಂಟಮ್ ಕಳೆದುಕೊಂಡ ಆರ್​ಸಿಬಿ, ಲೀಗ್​ ಹಂತದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನ ಮಾತ್ರ ಗೆಲ್ತು.

ಇಷ್ಟೇ ಪಂದ್ಯಗಳನ್ನು ಗೆದ್ದಿದ್ದ ಚೆನ್ನೈ, ರನ್​ರೇಟ್ ಆಧಾರದಲ್ಲಿ 2ನೇ ಸ್ಥಾನಕ್ಕೇರಿತು. 2ನೇ ಸ್ಥಾನದಲ್ಲಿದ್ದ ಆರ್​ಸಿಬಿ, 3ನೇ ಸ್ಥಾನಕ್ಕೆ ಕುಸಿದಿತ್ತು. ಇದರೊಂದಿಗೆ ಮೊದಲ ಕ್ವಾಲಿಫೈಯರ್​ನಲ್ಲಿ ಆಡುವ ಕನಸಿನಲ್ಲಿದ್ದ ಆರ್​ಸಿಬಿ, ಎಲಿಮಿನೇಟರ್​ನಲ್ಲಿ ಸೆಣಸಾಡಬೇಕಾಯ್ತು. ಬಳಿಕ ಎಲಿಮಿನೇಟರ್​ನಲ್ಲೇ ಸೋಲುಂಡು ಆರ್​ಸಿಬಿ ಹೊರಬಿದ್ದಿತ್ತು.

2021ರ ಐಪಿಎಲ್​​ನಲ್ಲಾದ ಘಟನೆ ಮತ್ತೆ ಮರುಕಳಿಸಿದ್ರೆ ಏನ್​ ಗತಿ ಅನ್ನೋದು ಸದ್ಯ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow