ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್: ದೇವಸ್ಥಾನದ ಆಸ್ತಿ ಎಂದ ಆಡಳಿತ ಮಂಡಳಿ!

ಡಿಸೆಂಬರ್ 22, 2024 - 21:58
 0  19
ದೇವಸ್ಥಾನದ ಹುಂಡಿಗೆ ಬಿತ್ತು ಐಫೋನ್: ದೇವಸ್ಥಾನದ ಆಸ್ತಿ ಎಂದ ಆಡಳಿತ ಮಂಡಳಿ!

ಹುಂಡಿಗೆ ಹಣ ಹಾಕುವ ಮೂಲಕ ದೇವರು ನಮ್ಮೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಮೃದ್ಧಿ ನೀಡುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ಭಕ್ತನೊಬ್ಬ ಅಚಾತುರ್ಯದಿಂದ ಹುಂಡಿಗೆ ಮೊಬೈಲ್ ಹಾಕಿದ್ದಾರೆ. ಸಿನಿಮಾದಂತೆ ಇಲ್ಲಿನ ದೇವಸ್ಥಾನದ ಆಡಳಿತಮಂಡಳಿ ಕೂಡ ಫೋನ್ ವಾಪಸ್ ನೀಡದೆ, ಅದನ್ನು ದೇವಸ್ಥಾನದ ಆಸ್ತಿ ಎಂದು ಪರಿಗಣಿಸಿದೆ. ತಮಿಳುನಾಡಿನ ಚಂಗಲ್​ಪಟ್ಟು ಜಿಲ್ಲೆಯ ತಿರುಪ್ಪೊರೂರ್​ನ ಪ್ರಸಿದ್ಧ ಕಂದಸ್ವಾಮಿ ದೇವಾಲಯಕ್ಕೆ ಭಕ್ತ ದಿನೇಶ್ ಎನ್ನುವರು ಭೇಟಿ ಕೊಟ್ಟಿದ್ದರು.

 ಈ ವೇಳೆ ಹುಂಡಿಗೆ ಭಕ್ತನ ಐಫೋನ್​ ಆಕಸ್ಮಿಕವಾಗಿ ಬಿದ್ದಿದೆ. ಈ ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಭಕ್ತ, ಐಫೋನ್​ ಬಿದ್ದಿದೆ ಎಂದು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಓಪನ್​ ಮಾಡಿದ್ದು ಐಫೋನ್​ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಐಫೋನ್​​ನ್ನು ಭಕ್ತನಿಗೆ ವಾಪಸ್​ ನೀಡಲು ನಿರಾಕರಿಸಿದೆ. ಹುಂಡಿಯಲ್ಲಿ ಬಿದ್ದಿದ್ದು, ದೇವಸ್ಥಾನಕ್ಕೆ ಸ್ವಂತ ಎಂದು ಆಡಳಿತ ಮಂಡಳಿ ಹೇಳಿದೆ.

ಇನ್ನು ಮೊಬೈಲ್​ನಲ್ಲಿರುವ ಡಾಟಾವನ್ನು ಬೇಕಾದರೆ ಕೊಡುತ್ತಿವೆ. ಆದರೆ ಐಫೋನ್​​ನ್ನು ವಾಪಸ್ ಕೊಡುವುದಿಲ್ಲ. ನಿಮ್ಮದು ಏನೇ ಇದ್ದರು ಹುಂಡಿ ಎಣಿಕೆ ಸಮಯದಲ್ಲಿ ಬಂದು ಹೇಳಿಕೊಳ್ಳಬಹುದು. ಅಲ್ಲಿವರೆಗೆ ಐಫೋನ್ ದೇವಾಲಯಕ್ಕೆ ಸೇರಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow