ದೇಶಕ್ಕೆ ಮಾದರಿ ಆಯ್ತು ಗೃಹಲಕ್ಷ್ಮಿ ಯೋಜನೆ: ಸರ್ಕಾರದ ಹಣದಿಂದ ಖಾರ ಪುಡಿ ಮಾಡೋ ಯಂತ್ರ ಖರೀದಿಸಿದ ಮಹಿಳೆ!

ಬೆಳಗಾವಿ:- ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ದೇಶಕ್ಕೆ ಮಾದರಿ ಆಗಿದೆ ಅಂದ್ರೆ ತಪ್ಪಾಗೋದಿಲ್ಲ. ಗೃಹಲಕ್ಷ್ಮಿ ಹಣ ನಿಜಕ್ಕೂ ಮಹಿಳೆಯರಿಗೆ ಒಂದಿಲ್ಲದ ಒಂದು ರೀತಿ ಉಪಯೋಗ ಆಗುತ್ತಿದೆ.
ಅದರಂತೆಯೇ ಇದೀಗ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬರು ಖಾರ ಪುಡಿ ಮಾಡೋ ಯಂತ್ರ ಖರೀದಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಗೃಹಲಕ್ಷ್ಮಿ ಹಣ ಜೋಡಿಸಿ ಅದರಿಂದ ಖಾರ ಪುಡಿ ಮಾಡೋ ಯಂತ್ರವನ್ನು ಮಹಿಳೆಯೊಬ್ಬರು ಖರಿದೀಸಿದ್ದಾರೆ. ಯಂತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ.
ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖಾರ ಪುಡಿ ಮಾಡೋ ಯಂತ್ರವನ್ನು ಖರೀದಿಸಿ ಗೃಹಲಕ್ಷ್ಮಿ ಪ್ರಯೋಜನ ಪಡೆದಿದ್ದಾರೆ. ಈ ಯಂತ್ರವನ್ನು ಉದ್ಘಾಟಿಸಲೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಹ್ವಾನಿಸಿದ್ದಾರೆ. ಅವರ ಕೈಯಾರೆ ಉದ್ಘಾಟನೆ ಮಾಡಿದ್ದಾರೆ.ಗೃಹಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರಿಗೆ ಉಪಯೋಗವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






