ಧರ್ಮಸ್ಥಳ ಕೇಸ್ʼನಲ್ಲಿ ಸತ್ಯ ಹೊರಗೆ ಬರಬೇಕಾದ್ರೆ NIA ತನಿಖೆ ಆಗಲೇಬೇಕು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಧರ್ಮಸ್ಥಳ ಕೇಸ್ನಲ್ಲಿ ಸತ್ಯ ಹೊರಗೆ ಬರಬೇಕಾದ್ರೆ NIA ತನಿಖೆ ಆಗಲೇಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ನಲ್ಲಿ ಸತ್ಯ ಹೊರಗೆ ಬರಬೇಕಾದರೆ ಎನ್ಐಎ (NIA) ತನಿಖೆ ಆಗಲೇಬೇಕು. ಸಿಎಂ ಹೇಳಿದ ಹಾಗೆ ತನಿಖೆ ಆಗಲೇಬೇಕು. ನಾವು ಹೇಳ್ತಿರೋದು ಎನ್ಐಎಯಿಂದ ತನಿಖೆ ಆಗಲಿ.
ಯಾಕೆ ಎನ್ಐಎ ಅಂದರೆ ಕೆಲವು ಯೂಟ್ಯೂಬರ್ಗಳು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಬಂತು. ಇವರಿಗೆ ಫಂಡ್ ಮಾಡಿದ್ದು ಯಾರು, ಬೇರೆ ರಾಜ್ಯದಿಂದ, ಬೇರೆ ದೇಶದಿಂದ ಫಂಡ್ ಮಾಡಿದ್ದಾರಾ ಎಂಬುದು ಗೊತ್ತಾಗಬೇಕು. ಎಸ್ಐಟಿ ಮೂಲಕ ಸತ್ಯ ಹೊರಬರುತ್ತೆ ಅಂತ ನಂಬಿಕೆ ಜನರಿಗೆ ಇಲ್ಲ. ಹೀಗಾಗಿ ಎನ್ಐಎ ತನಖೆಗೆ ಕೊಡಿ ಅಂತಿರೋದು ಎಂದು ತಿಳಿಸಿದರು.
ಎಡಪಂಥೀಯ ಸಂಘಟನೆ ಇದರಲ್ಲಿ ಇವೆ ಎಂದು ಚರ್ಚೆ ಆಗುತ್ತಿದೆ. ಅದಕ್ಕಾಗಿ ಎನ್ಐಎ ತನಿಖೆ ಆಗಬೇಕು. ಈ ವಿಷಯದಲ್ಲಿ ನಾವು ರಾಜಕೀಯ ಬೆರೆಸೋ ಪ್ರಶ್ನೆ ಇಲ್ಲ. ರಾಜಕೀಯ ಮಾಡೋಕೆ ಬೇರೆ ವಿಷಯ ಇವೆ. ಸರ್ಕಾರ ನಮಗೆ ಸಾಕಷ್ಟು ವಿಷಯ ಕೊಡುತ್ತಿದೆ. ಧಾರ್ಮಿಕ ವಿಷಯದಲ್ಲಿ ರಾಜಕೀಯ ಮಾಡೋ ಅವಶ್ಯಕತೆ ಜೆಡಿಎಸ್ಗೆ ಇಲ್ಲ. ಎನ್ಐಎ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?