ನಟ ದರ್ಶನ್ ಜೈಲಿನಲ್ಲಿದ್ರೂ “ಕಾಟೇರ” ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ!

ಸೆಪ್ಟೆಂಬರ್ 29, 2024 - 18:00
 0  11
ನಟ ದರ್ಶನ್ ಜೈಲಿನಲ್ಲಿದ್ರೂ “ಕಾಟೇರ” ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆ!

ಐಫಾ 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬು ಧಾಬಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುತ್ತಿರುವ ಈ ಸಮಾರಂಭದಲ್ಲಿ ಕನ್ನಡದ ಸಿನಿಮಾಗಳಿಗೂ ಪ್ರಶಸ್ತಿ ನೀಡಲಾಗಿದೆ.  ಕಾಟೇರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಕರೀಯರ್ನ ಲ್ಲೇ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದೆ. ಹೋದ ಕಡೆಗಳಲ್ಲೆ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಕರ್ನಾಟಕದಲ್ಲೇ ಮಾತ್ರ ರಿಲೀಸ್ ಆಗಿದ್ದ ಕಾಟೇರ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ದರ್ಶನ್ ಜೈಲಿನಲ್ಲಿದ್ದರು ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾಕ್ಕೆ ಪ್ರಶಸ್ತಿಗಳು, ಬಹುಮಾನಗಳು ಹರಿದು ಬರುತ್ತಿವೆ.

ಇತ್ಥೀಚೆಗೆ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬರೋಬ್ಬರಿ 4 ಪ್ರಶಸ್ತಿಗಳನ್ನು ಕಾಟೇರಗೆ ಬಂದಿದ್ದವು. ಇದರ ಬೆನ್ನಲ್ಲೇ ಕಾಟೇರ ಮತ್ತೆ ನಾಲ್ಕು ಆವಾರ್ಡ್​ಗಳನ್ನು ಪಡೆದುಕೊಂಡಿದೆ. ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್​​ಎ) ಕಾರ್ಯಕ್ರಮದಲ್ಲಿ ದರ್ಶನ್‌ ಅಭಿನಯಿಸಿದ್ದ ಕಾಟೇರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡಿರುವ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ನಟಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಒಲಿದು ಬಂದಿದೆ.

ಡೆಬ್ಯೂ ಆ್ಯಕ್ಟಿಂಗ್ ಗಾಗಿ ಮಾಲಶ್ರೀ ಅವರ ಮಗಳು ಆರಾಧನಾ ಅವರಿಗೆ ಪ್ರಶಸ್ತಿ ಸಿಕ್ಕಿದ್ದು, ತೆಲುಗು ನಟ ಜಗಪತಿ ಬಾಬು ಅವರಿಗೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಐಫಾ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಲಸ್ಯ ತೋರಿದೆಯೇ ಎಂಬ ಅನುಮಾನ ಮೂಡಿದೆ. ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಕೈತೊಳೆದುಕೊಂಡಿದೆ ಐಫಾ. 2023 ರಲ್ಲಿ ಕನ್ನಡದಲ್ಲಿ ಹಲವಾರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಐಫಾ ಕೇವಲ ಎರಡೇ ಸಿನಿಮಾಗಳಿಗೆ ಇರುವ ಎಲ್ಲ ಪ್ರಶಸ್ತಿಗಳನ್ನೂ ಕೊಟ್ಟು ಕೈತೊಳೆದುಕೊಂಡಿದೆ. 

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow