ನಿಮ್ಮ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗಬೇಕೆ!? ಮಜ್ಜಿಗೆಗೆ ಇದೊಂದು ಪದಾರ್ಥ ಮಿಕ್ಸ್ ಮಾಡಿ!

ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ನೀವು ಇದೊಂದು ನೈಸರ್ಗಿಕ ಪಾನೀಯ ಕುಡಿದರೆ ಸಾಕು. ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಆ ಪಾನೀಯ ಯಾವುದು ಅಂತೀರಾ? ಈ ಸ್ಟೋರಿ ಓದಿ
ಎಲ್ಲರೂ ಮಜ್ಜಿಗೆ ಕುಡಿದಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಬೇಸಿಗೆ ಕಾಲದಲ್ಲಂತೂ ಮಜ್ಜಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಸಾಮಾನ್ಯವಾಗಿ ಅತಿಥಿಗಳು ಮನೆಗೆ ಬಂದಾಗ ಮಜ್ಜಿಗೆ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಆದರೆ, ಈ ಮಜ್ಜಿಗೆಯನ್ನು ಮೊಸರಿನಿಂದ ಹೊರತೆಗೆಯುವ ಮೂಲಕ ತಯಾರಿಸಲಾಗುತ್ತದೆ. ಇದು ನಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದು
ಆದರೆ, ಈ ಮಜ್ಜಿಗೆಯನ್ನು ಕುಡಿಯುವ ಮೂಲಕ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು ಎಂದು ಕೇಳಿದರೆ ನಿಮಗೆ ಶಾಕ್ ಆಗಬಹುದು. ಆದರೆ ಇದು ನಿಜ ಮಜ್ಜಿಗೆಯಲ್ಲಿ ಬೆಣ್ಣೆ ಅಥವಾ ಕೆನೆ ಇರುವುದಿಲ್ಲ. ಇದಕ್ಕೆ ನೀರು ಹಾಕಿ ಬೇಕಾದಷ್ಟು ತೆಳ್ಳಗೆ ಮಾಡಿಕೊಳ್ಳುತ್ತೇವೆ. ಮಜ್ಜಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ. ಜೊತೆಗೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ
ಮಜ್ಜಿಗೆ ಕುಡಿಯುವುದರಿಂದ ನಮ್ಮ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ಕರುಳಿನ ಚಲನೆಗೂ ಸಹಾಯ ಮಾಡುತ್ತದೆ. ಮಜ್ಜಿಗೆ ಉತ್ತಮ ಪ್ರೋಬಯಾಟಿಕ್ ಆಗಿರುವುದರಿಂದ ಕ್ಯಾಲ್ಸಿಯಂ ಸಹ ಸಮೃದ್ಧವಾಗಿದೆ. ಇದು ಆರೋಗ್ಯಕರ ಮೂಳೆಗಳನ್ನು ಉತ್ತೇಜಿಸುತ್ತದೆ. 100 ಮಿಲಿ ಮಜ್ಜಿಗೆ 40 ಕ್ಯಾಲೋರಿ ಶಕ್ತಿಯನ್ನು ನೀಡುತ್ತದೆ.
ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಪ್ರತಿದಿನ ವಿಶೇಷವಾಗಿ ಮಧ್ಯಾಹ್ನ ಮಜ್ಜಿಗೆ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಆದರೆ, ಈ ಮಜ್ಜಿಗೆ ನೀರಿಗೆ ಮೆಂತ್ಯವನ್ನು ಸೇರಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು. ಅಲ್ಲದೇ ಮೆಂತ್ಯದಿಂದ ದೇಹದ ತೂಕವನ್ನು ಕೂಡ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ನಮ್ಮ ತ್ವಚೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.
ಮಜ್ಜಿಗೆಯನ್ನು ಮಾಡಿ ಮೆಂತ್ಯವನ್ನು ನುಣ್ಣಗೆ ಪುಡಿ ಮಾಡಿ ಇವೆರಡನ್ನು ಮಿಕ್ಸ್ ಮಾಡಿ. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯದ ಪುಡಿಯನ್ನು ಬೆರೆಸಿ ಚೆನ್ನಾಗಿ ಕುಡಿಯಿರಿ. ಹೀಗೆ ಮಾಡುವುದರಿಂದ ನೀವು ಅತಿ ಕಡಿಮೆ ಸಮಯದಲ್ಲಿ ತೂಕ ಕಳೆದುಕೊಳ್ಳುತ್ತೀರಿ. ಇದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






