ಪುಷ್ಪ 2 ಪ್ರೀಮಿಯರ್ ವೇಳೆ ಕಾಲ್ತುಳಿತ ಕೇಸ್: ಮೃತ ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ!

ಡಿಸೆಂಬರ್ 25, 2024 - 17:59
 0  11
ಪುಷ್ಪ 2 ಪ್ರೀಮಿಯರ್ ವೇಳೆ ಕಾಲ್ತುಳಿತ ಕೇಸ್: ಮೃತ ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ!

ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತದ ಕೇಸ್​ಗೆ ಸಂಬಂಧಿಸಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಡಿ.4ರಂದು ‘ಪುಷ್ಪ 2’ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತ ರೇವತಿ ಪುತ್ರ ಶ್ರೀಜಾ ಕೂಡ ತೀವ್ರ ಗಂಭೀರ ಸ್ಥಿತಿಯಲ್ಲಿದ್ದು,

ಈಗಾಗಲೇ ಅಲ್ಲು ಅರ್ಜುನ್ ತಂದೆ ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಈ ಹಿಂದೆ 25 ಲಕ್ಷ ರೂ. ಕೊಡೋದಾಗಿ ತಿಳಿಸಿದರು. ಆದರೆ ಈಗ ಮೃತಪಟ್ಟ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡೋದಾಗಿ ಅಲ್ಲು ಅರವಿಂದ್ ತಿಳಿಸಿದ್ದಾರೆ.

ಬಾಲಕ ಶ್ರೀತೇಜ್ ತಂದೆಗೆ ಧೈರ್ಯ ತುಂಬಿದ ನಿರ್ಮಾಪಕರು ರೇವತಿ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುತ್ತಿದ್ದಾರೆ ಎಂದು ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ್ದಾರೆ. ಶ್ರೀತೇಜ್ ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲು ಅರ್ಜುನ್ ಪರವಾಗಿ 1 ಕೋಟಿ ರೂ., ಪುಷ್ಪ 2 ನಿರ್ಮಾಪಕರು ಮತ್ತು ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಪರಿಹಾರ ನೀಡ್ತಿದ್ದಾರೆ.

ಪುಷ್ಪ 2 ಪ್ರೀಮಿಯರ್ ಶೋ ವೇಳೆ ಹೈದರಾಬಾದ್​ನಲ್ಲಿ ನಡೆದ ಕಾಲ್ತುಳಿತದ ಕೇಸ್​ ದಿನದಿಂದ ದಿನಕ್ಕೆ ಹೊಸ ಟ್ಟಿಸ್ಟ್​​ ಪಡೆಯುತ್ತಿದೆ. ಬೇಲ್​ ಸಿಕ್ಕಿ ಹೊರ ಬಂದ್ರು ನಟ ಅಲ್ಲು ಅರ್ಜುನನ್ನು ಪೊಲೀಸರು ಬಿಡ್ತಿಲ್ಲ. ಮತ್ತೆ ನೋಟಿಸ್ ನೀಡಿದ್ರು. ಸತತ 4 ಗಂಟೆಗಳ ಕಾಲ ನಟನನ್ನು ಪೊಲೀಸರು ವಿಚಾರಣೆ ನಡೆಸಿದ್ರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow