ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ಬಾಸ್ ಖ್ಯಾತಿಯ ರಂಜಿತ್..! ಯಾಕೆ ಗೊತ್ತಾ..?
ಬಿಗ್ ಬಾಸ್ ಖ್ಯಾತಿಯ ರಂಜಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರ ವಿವಾಹ ನೆರವೇರಿದ್ದರೂ, ಈಗ ಮನೆ ವಿವಾದದ ಕಾರಣ ಪೊಲೀಸರ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿದೆ.
2018ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ರಂಜಿತ್ ಅವರ ಅಕ್ಕ ರಶ್ಮಿ ಹಾಗೂ ಪತಿ ಜಗದೀಶ್ ವಾಸವಿದ್ದಾರೆ. 2025ರಿಂದ ಇದೇ ಮನೆಗೆ ರಂಜಿತ್ ಹಾಗೂ ಅವರ ಪತ್ನಿಯೂ ಸೇರಿಕೊಂಡಿದ್ದರು. ಮನೆ ಖರೀದಿಸಲು ತಾನೂ ಹಣ ಹಾಕಿದ್ದೇನೆ ಎಂದು ರಂಜಿತ್ ಮತ್ತು “ಮನೆ ನನ್ನ ಹೆಸರಿನಲ್ಲಿ ಇದೆ” ಎನ್ನುವ ಅಕ್ಕ-ಭಾವನ ನಡುವೆ ವಾಗ್ವಾದ ಜಗಳಕ್ಕೆ ತಿರುಗಿತು.
ಸದ್ಯ, ‘ಮನೆ ಬಿಟ್ಟು ಹೋಗು, ನಂದೆ ಮನೆ ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಜಗದೀಶ್ ದೂರು ದಾಖಲು ಮಾಡಿದ್ದಾರೆ. ‘ನನ್ನ ಹೆಸರಲ್ಲಿ ಫ್ಲಾಟ್ ಇದೆ, ನೀವು ಮನೆ ಖಾಲಿ ಮಾಡಬೇಕು’ ಎಂದು ರಂಜಿತ್, ರಶ್ಮಿಗೆ ಹೇಳಿದ್ದಾರಂತೆ.
ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಗಂಭೀರವಲ್ಲದ ಪ್ರಕರಣ (Non-Cognizable Report) ದಾಖಲು ಮಾಡಿದ್ದಾರೆ. ಫ್ಲಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿದೆ. ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ಬುದ್ಧಿ ಹೇಳಿ ಪೊಲೀಸರು ಕಳುಹಿಸಿದ್ದಾರೆ.
ರಂಜಿತ್ ಅವರು ಧಾರಾವಾಹಿ ಮತ್ತು ಸಿಸಿಎಲ್ ಕ್ರಿಕೆಟ್ ಮೂಲಕ ಪರಿಚಿತರಾಗಿದ್ದು, ನಂತರ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದರು. ಆದರೆ ಅಲ್ಲಿ ಸಹ ಗಲಾಟೆಯಿಂದ ಹೊರ ಹೋಗುವ ಪರಿಸ್ಥಿತಿ ಎದುರಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?