ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಹಾಗಿದ್ರೆ ಇಲ್ಲಿ ಮ್ಯಾನೇಜರ್ ಹುದ್ದೆ ಖಾಲಿ ಇದೆ!

ಎಪ್ರಿಲ್ 17, 2025 - 08:17
 0  13
ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಹಾಗಿದ್ರೆ ಇಲ್ಲಿ ಮ್ಯಾನೇಜರ್ ಹುದ್ದೆ ಖಾಲಿ ಇದೆ!

ನಿಮಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ ಹಾಗಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಂಡಸ್ಟ್ರೀಯಲ್ ಡೆವಲಪ್​ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. 


ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಈಗಾಗಲೇ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದೆ. ಬಂಗಾರದಂತ ಅವಕಾಶವನ್ನು ಅಭ್ಯರ್ಥಿಗಳು ಬಳಕೆ ಮಾಡಿಕೊಳ್ಳಬೇಕು. 

ಉದ್ಯೋಗದ ಹೆಸರು; ವಿವಿಧ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು (Specialist Officer)

ಡೆಪ್ಯೂಟಿ ಜನರಲ್ ಮ್ಯಾನೇಜರ್- 8
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 42
ಮ್ಯಾನೇಜರ್ ಹುದ್ದೆಗಳು- 69
ಒಟ್ಟು ಉದ್ಯೋಗಗಳು; 119 ಇವೆ

ವಿದ್ಯಾರ್ಹತೆ;

ಬಿಇ, ಬಿಟೆಕ್, ಎಂಎಸ್​ಸಿ, ಎಂಸಿಎ, ಎಂಟೆಕ್, ಎಂಇ, ಸಿಎ, ಎಂಬಿಎ, ಬಿಸಿಎ, ಬಿಎಸ್​ಸಿ, ಸಿವಿಲ್ ಇಂಜಿನಿಯರ್, (ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಕೇಳಲಾಗಿದೆ)

ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?

ಜನರಲ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳು- 1,050 ರೂಪಾಯಿ
ಎಸ್​ಸಿ ಎಸ್​ಟಿ- 250 ರೂಪಾಯಿ

ವಯೋಮಿತಿ- 25 ರಿಂದ 40 ವರ್ಷದ ಒಳಗಿನವರು

ಹುದ್ದೆಗೆ ಆಯ್ಕೆ ಪ್ರಕ್ರಿಯೆ

ಪೂರ್ವಭಾವಿ ತಪಾಸಣೆ 
ದಾಖಲೆ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ; 20 ಏಪ್ರಿಲ್ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow