ಯಾವುದೋ ಅಡಬೆ ದುಡ್ಡು ತಂದು ಎಂಎಲ್‌ಎ ಆಗಿದ್ದೀಯಾ: ಪೊನ್ನಣ್ಣ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ!

ಎಪ್ರಿಲ್ 5, 2025 - 22:02
 0  20
ಯಾವುದೋ ಅಡಬೆ ದುಡ್ಡು ತಂದು ಎಂಎಲ್‌ಎ ಆಗಿದ್ದೀಯಾ: ಪೊನ್ನಣ್ಣ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ!

ಕೊಡಗು:- ಯಾವುದೋ ಅಡಬೆ ದುಡ್ಡು ತಂದು ಎಂಎಲ್‌ಎ ಆಗಿದ್ದೀಯಾ, ಹುಷಾರ್ ಎಂದು ಕಾಂಗ್ರೆಸ್ ಶಾಸಕ ಪೊನ್ನಣ್ಣ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ. 

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ ಎಂದು 'ಕೈ' ಶಾಸಕನ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದ್ದಾರೆ. ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ ಅಷ್ಟೆ. ಯಾವುದೋ ಅಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ. ನಿನ್ನನ್ನು ಮೂರು ವರ್ಷದ ನಂತರ ಕೊಡಗಿನ ಜನ ಇಲ್ಲಿಂದ ಓಡಿಸುತ್ತಾರೆ. ನಮ‌್ಮ ಸಿಟ್ಟು ಹೆಚ್ಚು ಮಾಡಬೇಡಿ ಎಂದು ಗುಡುಗಿದ್ದಾರೆ.

ವಿನಯ್ ಸಾವಿಗೆ ಹಣದ ಕಾರಣ ಅನ್ನೋದು ಬಿಟ್ಟು ಬಿಡಿ. ನಿಮ್ಮ ಭಿಕ್ಷೆಯ ಹಣ ನಮಗೆ ಬೇಕಿಲ್ಲ. ಪದೇ ಪದೇ ಹಣದ ವಿಚಾರ ಹೇಳಿದರೆ ಸರಿ ಇರಲ್ಲ. ನಿಮಗೆ ಧೈರ್ಯ ಇದ್ದರೆ ವಿನಯ್ ಮನೆಗೆ ಹೋಗಿ‌ ಜನ ಹೂವಿನ ಹಾರ ಹಾಕುತ್ತಾರೋ ಛೀ ಥೂ ಅಂತಾ ಉಗಿಯುತ್ತಾರಾ ನೋಡಿ. ನಿಮಗೆ ಏನೂ ಎರಡು ಕೊಂಬು ಇದ್ದವಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow