ಶುಕ್ರವಾರ ಜಸ್ಟ್ ಹೀಗೆ ಮಾಡಿದ್ರೆ ಸಾಕು, ನೀವು ಬೇಡ ಅಂದ್ರೂ ಅದೃಷ್ಟ ಒಲಿದು ಬರತ್ತೆ!

ಶುಕ್ರವಾರದ ದಿನದಂದು ಲಕ್ಷ್ಮಿ ಪೂಜೆ ಮಾಡುವುದಕ್ಕೆ ಮತ್ತು ಉಪವಾಸ ವ್ರತವನ್ನು ಆಚರಿಸುವುದಕ್ಕೆ ಹೆಚ್ಚಿನ ಪ್ರಧಾನ್ಯತೆಯಿದೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಯ ಪೂಜೆ ಮತ್ತು ಆಕೆಯ ಹೆಸರಿನಲ್ಲಿ ಮಾಡುವ ಉಪವಾಸದ ವ್ರತವು ನಮ್ಮನ್ನು ಹಣದ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಧನಾಗಮನವಾಗುವಂತೆ ಮಾಡುತ್ತದೆ. ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಸ್ತ್ರೀ ಮತ್ತು ಪುರುಷರಿಬ್ಬರೂ ಶುಕ್ರವಾರ ವ್ರತವನ್ನು ಮಾಡಬಹುದು. ಇದು ನಮಗೆ ಭೌತಿಕ ಸಂತೋಷವನ್ನು ಕರುಣಿಸುತ್ತದೆ.
ಶುಕ್ರವಾರ ನೀವು ಈ ಕೆಲಸಗಳನ್ನು ಮಾಡುವುದರಿಂದ ನೀವು ಅದೃಷ್ಟವನ್ನು ಪಡೆದುಕೊಳ್ಳುವುದು ಮಾತ್ರವಲ್ಲ, ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರ ಅದೃಷ್ಟವು ಹೊಳೆಯಲು ಪ್ರಾರಂಭವಾಗುತ್ತದೆ.
ಅಲ್ಲದೇ ನೀವು ಯಾವುದೇ ಸಮಸ್ಯೆಗಳಿಗೆ ಒಳಗಾದರೂ ಅದರಿಂದ ಶೀಘ್ರದಲ್ಲೇ ಪರಿಹಾರವನ್ನು ಪಡೆದುಕೊಳ್ಳಬಹುದು. ನಿಮ್ಮ ಮನೆಯಲ್ಲಿ ಯಾರಾದರೂ ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಪರಿಹಾರಗಳು ನಿಮ್ಮ ಸಮಸ್ಯೆಯನ್ನು ತೊಡೆದುಹಾಕಲು ಸಹ ನಿಮಗೆ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಬೇಡವೆಂದರೂ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದಕ್ಕಾಗಿ ಶುಕ್ರವಾರದ ದಿನದಂದು ನಾವು ಏನು ಮಾಡಬೇಕು ನೋಡಿ..
ಪ್ರತಿದಿನ ಸಂಜೆ, ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಹಾಗೂ ''ಓಂ ವಾಸುದೇವಾಯ ನಮಃ'' ಎನ್ನುವ ಮಂತ್ರವನ್ನು ಎರಡು ಬಾರಿ ತಪ್ಪದೇ ಪಠಿಸಬೇಕು. ಹೀಗೆ ಮಾಡುವುದರಿಂದ ಶ್ರೀ ಕೃಷ್ಣನ ಅಪಾರವಾದ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಮತ್ತು ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿಯೂ ಇರುತ್ತದೆ
ಶ್ರೀಕೃಷ್ಣನಿಗೆ ದಕ್ಷಿಣಾವರ್ತಿ ಶಂಖದಿಂದ ಅಭಿಷೇಕ ಮಾಡುವುದರಿಂದ ಮನೆಯಲ್ಲಿ ರೋಗಗಳು ನಾಶವಾಗುತ್ತವೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ಅಖಂಡವಾಗಿ ಉಳಿಯುತ್ತದೆ. ಪ್ರತಿ ಗುರುವಾರ ಪೂಜೆಯ ನಂತರ ಹಳದಿ ಧಾನ್ಯಗಳನ್ನು ದಾನ ಮಾಡುವುದರಿಂದ ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಪ್ರಾಪ್ತವಾಗುತ್ತದೆ.
ಹಣವಿಲ್ಲದವರು ಅಥವಾ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು. ಶುಕ್ರವಾರ ರಾತ್ರಿ 12 ಗಂಟೆಗೆ ಕೆಂಪು ಬಟ್ಟೆ ಧರಿಸಿ ಒಬ್ಬಂಟಿಯಾಗಿ ಕುಳಿತುಕೊಳ್ಳಿ. ನಿಮ್ಮ ಮುಂದೆ 10 ಲಕ್ಷ್ಮಿ ಕವಡೆಗಳನ್ನು ಇರಿಸಿ ಮತ್ತು ಎಣ್ಣೆಯ ದೀಪವನ್ನು ಬೆಳಗಿಸಿ. ಪ್ರತೀ ಕವಡೆಗೂ ಕುಂಕುಮವನ್ನು ಹಚ್ಚಿ ಮತ್ತು ನಂತರ ಕಮಲ ಬೀಜದ ಜಪಮಾಲೆಯನ್ನು ಹಿಡಿದು 'ಓಂ ಹ್ರೀಂ ಶ್ರೀಂ ಶ್ರೀ ಯೈ ಫಟ್' ಎನ್ನುವ ಮಂತ್ರವನ್ನು 5 ಬಾರಿ ಪಠಿಸಿ. ಈ ಮಂತ್ರವನ್ನು ಜಪಿಸಿದ ನಂತರ, ಪೂಜೆಯಲ್ಲಿ ಇರಿಸಲಾದ ಕವಡೆಗಳನ್ನು ನೀವು ಹಣ ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಧನಾಗಮನವಾಗುತ್ತದೆ ಮತ್ತು ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.
ಪೂಜೆ ಮಾಡುವಾಗ ಸ್ವಲ್ಪ ಹಣವನ್ನು ದೇವರ ಕೋಣೆಯಲ್ಲಿ ಇಡಿ. ಪೂಜೆಯನ್ನು ಮಾಡಿದ ನಂತರ, ಈ ಹಣವನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ.
ತಮ್ಮ ಜೀವನದಲ್ಲಿ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು. ಅವರು ನಿರಂತರವಾಗಿ 'ಕೃಷ್ಣಃ ಶರಣಂ ಮಮ' ಎನ್ನುವ ಸರಳ ಮಂತ್ರವನ್ನು ಪಠಿಸುತ್ತಲೇ ಇರಬೇಕು. ಶ್ರೀಕೃಷ್ಣನು ಖಂಡಿತ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತಾನೆ ಎನ್ನುವ ನಂಬಿಕೆಯಿದೆ.
ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಅಶಾಂತಿಯ ವಾತಾವರಣ ಉಂಟಾದಾಗ, ನೀವು ಕನಿಷ್ಟ 108 ಬಾರಿ ಅಂದರೆ ಒಂದು ಜಪಮಾಲೆ ಪೂರ್ಣಗೊಳ್ಳುವವರೆಗೆ 'ಕ್ಲೀಂ ಋಷಿ ಕೇಶ ಯಾ ನಮಃ' ಎಂಬ ಮಂತ್ರವನ್ನು ಜಪಿಸಿದರೆ ಅದು ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ
ತಮ್ಮ ಅದೃಷ್ಟವನ್ನು ಹೆಚ್ಚಿಸಲು, ಮಹಿಳೆಯರು "ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಕೃಷ್ಣಾಯ ಗೋವಿಂದಾಯ ಗೋಪಿಜನ ವಲ್ಲಭಾಯ ಶ್ರೀಂ ಶ್ರೀಂ ಶ್ರೀ" ಎನ್ನುವ ಮಂತ್ರವನ್ನು ಜಪಮಾಲೆಯನ್ನು ಹಿಡಿದು ಕನಿಷ್ಠ 51 ಬಾರಿಯಾದರೂ ಜಪಿಸಬೇಕು. ಇದು ನಿಮ್ಮ ಅದೃಷ್ಟವನ್ನು ಬೆಳಗಿಸುವುದು ಮಾತ್ರವಲ್ಲ, ನಿಮ್ಮ ಕುಟುಂಬದ ಅದೃಷ್ಟವನ್ನೂ ಬೆಳಗಿಸುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






