ಹೆಂಡತಿ ಜೊತೆ ಮಲಗಿದ್ದ ಪ್ರಿಯಕರ: ಸಿಟ್ಟಲೇ ಹತ್ಯೆಗೈದ ಗಂಡ! ಹಾಸಿಗೆಯಲ್ಲೇ ನಡೆದು ಹೋಯ್ತು ಘನಘೋರ ಕೃತ್ಯ!

ಡಿಸೆಂಬರ್ 8, 2024 - 12:22
 0  15
ಹೆಂಡತಿ ಜೊತೆ ಮಲಗಿದ್ದ ಪ್ರಿಯಕರ: ಸಿಟ್ಟಲೇ ಹತ್ಯೆಗೈದ ಗಂಡ! ಹಾಸಿಗೆಯಲ್ಲೇ ನಡೆದು ಹೋಯ್ತು ಘನಘೋರ ಕೃತ್ಯ!

ನವದೆಹಲಿ:- ಅವರಿಬ್ಬರು ಮದುವೆ ಆಗಿದ್ದರು. ತುಂಬಾ ಅನ್ಯೋನ್ಯವಾಗಿದ್ದರು. ಆದರೆ ಇವರಿಬ್ಬರ ಮಧ್ಯೆ ಆತನ ಎಂಟ್ರಿ ಇವರ ಜೀವನವನ್ನೇ ಹಾಳು ಮಾಡಿಬಿಡ್ತು.

ಎಸ್, ರಾತ್ರಿ ಮನೆಯಲ್ಲಿ ಹಾಸಿಗೆಯಲ್ಲಿ ಒಟ್ಟಿಗೆ ಇದ್ದುದನ್ನು ಕಂಡ ಆಕೆಯ ಗಂಡ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ಜರುಗಿದೆ. 

ಕುನ್ವರ್ ಸಿಂಗ್ ಕೂಲಿ ಕೆಲಸ ಮಾಡುತ್ತಿದ್ದ. ಆತ ತನ್ನ ಹೆಂಡತಿ ಆರತಿ ಮತ್ತು ಅವರ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕಳೆದ ಕೆಲವು ತಿಂಗಳುಗಳಿಂದ ಕುನ್ವರ್ ತನ್ನ ಹೆಂಡತಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದನು. ಇದರಿಂದ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು.

ಆತನ ಹೆಂಡತಿ ಹತ್ತಿರದ ಹಳ್ಳಿಯ ನಿವಾಸಿ ಛವಿನಾಥ್ ಸಿಂಗ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ಕುನ್ವರ್​ಗೂ ಅನುಮಾನವಿತ್ತು. ತನ್ನ ಊರಿಗೆ ಹೋಗುತ್ತಿದ್ದ ಕುನ್ವರ್ ಸಿಂಗ್ ಮನೆಯಲ್ಲಿ ಇಲ್ಲದಿದ್ದಾಗ ಆತನ ಹೆಂಡತಿ ತನ್ನ ಪ್ರೇಮಿಯೊಂದಿಗೆ ಇರುತ್ತಿದ್ದಳು. ಈ ವಿಚಾರಕ್ಕೆ ಸುಮಾರು ಹತ್ತು ದಿನಗಳ ಮೊದಲು ಕುನ್ವರ್ ಮತ್ತು ಆರತಿ ತೀವ್ರ ವಾಗ್ವಾದ ನಡೆಸಿದ್ದರು. ಈ ಘರ್ಷಣೆಯ ಬಳಿಕ ಆರತಿ ತನ್ನ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಳು. ಕುನ್ವರ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಬಂಧನದ ಭೀತಿಯಿಂದ ಆತ ಅಧಿಕಾರಿಗಳಿಗೆ ಕಾಣದಂತೆ ತಲೆಮರೆಸಿಕೊಂಡಿದ್ದ.

ಗುರುವಾರ ತಡರಾತ್ರಿ, ಕುನ್ವರ್ ಸಿಂಗ್ ಸುಳಿವು ನೀಡದೆ ತನ್ನ ಮನೆಗೆ ಬಂದಾಗ ಆರತಿ ಮತ್ತು ಛವಿನಾಥ್ ಬೆಡ್​ ರೂಂನಲ್ಲಿ ಒಟ್ಟಿಗೇ ಮಲಗಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಇಬ್ಬರ ಮೇಲೂ ಕೊಡಲಿಯಿಂದ ಹಲ್ಲೆ ನಡೆಸಿ, ಕೊಂದು ಹಾಕಿದ್ದಾನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow