Actor Vishal: ಮೈಕ್ ಹಿಡಿದು ನಡುಗುತ್ತಲೇ ಟ್ರೋಲಿಗರಿಗೆ ಟಾಂಗ್ ಕೊಟ್ಟ ವಿಶಾಲ್! VIDEO

ಇತ್ತೀಚೆಗೆ ವಿಶಾಲ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವೇದಿಕೆ ಏರಿದ್ದ ಅವರ ಕೈ ಸಾಕಷ್ಟು ನಡುಗುತ್ತಾ ಇತ್ತು. ಮೈಕ್ ಹಿಡಿಯಲು ಅವರು ಕಷ್ಟಪಟ್ಟಿದ್ದರು. ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಆತಂಕ ಮೂಡಿತ್ತು. ಆ ಬಳಿಕ ವಿಶಾಲ್ ಅವರಿಗೆ ಅತಿಯಾದ ಜ್ವರ ಇತ್ತು. ಈ ಕಾರಣದಿಂದಲೇ ಅವರ ಕೈ ನಡುಗುತ್ತಿತ್ತು ಎನ್ನಲಾಗಿತ್ತು. ಇದೀಗ ಶಾಲ್ ಗುಣಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಮಾರಂಭವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.
‘ಮದಗಜರಾಜ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾದ ವಿಶಾಲ್ ಅವರು ಮೈಕ್ ಅನ್ನು ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಶುರುವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಯ್ಯೋ ಏನಿದು ನಡುಗುತ್ತಿರುವುದು ನಿಲ್ಲುತ್ತಲೇ ಇಲ್ಲವಲ್ಲ ಎಂದರು. ಮತ್ತೆ ಈ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಲ್ಲ ಅಲ್ವಾ? ಎಂದು ತಮಾಷೆಯಾಗಿ ಮಾತನಾಡಿದರು. ಈ ಮೂಲಕ ಟ್ರೋಲ್ ಮಾಡಿದವರಿಗೆ ನಟ ಟಾಂಗ್ ಕೊಟ್ಟಿದ್ದಾರೆ.
ಇನ್ನೂ 12 ವರ್ಷಗಳ ಹಿಂದೆ ರಿಲೀಸ್ ಆಗಬೇಕಿದ್ದ ಸಿನಿಮಾ ‘ಮದಗಜರಾಜ’ ಇದೀಗ ಜ.12ಕ್ಕೆ ರಿಲೀಸ್ ಆಗಿತ್ತು. ಇದರ ಪ್ರಿ- ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ವಿಶಾಲ್ ಅವರ ಕೈ ನಡುಗ್ತಾ ಇತ್ತು. ಮೈಕ್ ಹಿಡಿಯಲು ಆಗದಷ್ಟೂ ಕೈ ನಡಗುತ್ತಿತ್ತು. ಮಾತುಗಳು ತೊದಲುತ್ತಿದ್ದವು. ಪದಗಳ ಉಚ್ಛಾರಣೆ ಕೂಡ ಸರಿಯಾಗಿ ಆಗಿರಲಿಲ್ಲ. ತೀವ್ರ ಅಸ್ವಸ್ಥರಾದಂತೆ ಕಂಡು ಬಂದ ವಿಶಾಲ್ ದೇಹ ಶೇಕ್ ಆಗುತ್ತಿತ್ತು. ಅವರ ಕಣ್ಣುಗಳಿಂದ ಕಣ್ಣೀರು ಉಮ್ಮಳಿಸಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹಾಗಾಗಿ ನಟ ಇದೀಗ ಟ್ರೋಲಿಗೆ ತಿರುಗೇಟು ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






