BBK11: ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಳ್ಳಲು ಹನುಮಂತ ಕೊಟ್ಟ ಐಡಿಯಾ ಏನು ಗೊತ್ತಾ!?

ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತ ಅವರು ಅದ್ಭುತವಾಗಿ ಆಟ ಆಡುತ್ತಿದ್ದು, ವೀಕ್ಷಕರ ಮನ ಗೆದ್ದಿದ್ದಾರೆ.
ಮುಗ್ಧನ ರೀತಿ ಇರೋದು ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಏನೇ ಇದ್ದರೂ ಓಪನ್ ಆಗಿ ಹೇಳುತ್ತಾರೆ. ಅವರಿಗೆ ಬಿಗ್ ಬಾಸ್ ಪ್ರೋಮೋದಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂಬುದರ ಐಡಿಯಾ ಇದೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ.
ನವೆಂಬರ್ 13ರ ಎಪಿಸೋಡ್ನಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಪ್ರತಿ ಜೋಡಿ ಮಣ್ಣಿನಲ್ಲಿ ತಮ್ಮ ಹೆಸರನ್ನು ರಚಿಸಬೇಕು. ಈ ರೀತಿ ರಚಿಸಿದ ಬಳಿಕ ಅದಕ್ಕೆ ಎದುರಾಳಿಗಳು ಅಡಚಣೆ ಉಂಟು ಮಾಡಬಹುದು. ಈ ಟಾಸ್ಕ್ ಆಡುವಾಗ ಹನುಮಂತ ಜಾರಿ ಬಿದ್ದಿದ್ದಾರೆ. ಎಲ್ಲರೂ ಹನುಮಂತನ ಬಳಿ ಎಚ್ಚರಿಕೆಯಿಂದ ಆಡುವಂತೆ ಹೇಳಿದ್ದಾರೆ. ಇದಕ್ಕೆ ಅವರು ಕೊಟ್ಟ ಉತ್ತರ ಫನ್ನಿ ಆಗಿತ್ತು.
ಈ ರೀತಿ ಬಿದ್ದರೆ ಪ್ರೋಮೋ ಕಟ್ ಹಾಕ್ತಾರೆ’ ಎಂದು ಹನುಮಂತ ಅವರು ಹೇಳಿದ್ದಾರೆ. ಇದಕ್ಕೆ ಎಲ್ಲರೂ ನಕ್ಕಿದ್ದಾರೆ. ಬಿಗ್ ಬಾಸ್ನಲ್ಲಿ ಆ ರೀತಿ ನಡೆಯುವುದು ಕೂಡ ನಿಜ. ಜಾರಿ ಬಿದ್ದಿದ್ದು, ಕಿತ್ತಾಟ ಮಾಡಿಕೊಂಡಿದ್ದರ ಒಂದು ಕ್ಲಿಪ್ನ ಪ್ರೋಮೋದಲ್ಲಿ ಹೈಲೈಟ್ ಮಾಡಲಾಗುತ್ತದೆ. ಈ ತಂತ್ರ ಹನುಮಂತ ಅವರಿಗೆ ತಿಳಿದಿದೆ. ಆದರೆ, ನಿಜಕ್ಕೂ ಅವರು ಈ ರೀತಿ ಆಟ ಆಡುತ್ತಿಲ್ಲ.
ಹನುಮಂತ ಅವರು ನೇರ ಮಾತುಗಳಿಂದ ಇಷ್ಟ ಆಗುತ್ತಾರೆ. ಅವರು ಉಸ್ತುವಾರಿ ವಹಿಸಿಕೊಂಡಾಗ ನೀಡುತ್ತಿದ್ದ ನಿರ್ಧಾರಗಳ ಬಗ್ಗೆ ಅನೇಕರಿಗೆ ಮೆಚ್ಚುಗೆ ಇದೆ
ನಿಮ್ಮ ಪ್ರತಿಕ್ರಿಯೆ ಏನು?






