Bigg Boss ಟಾಸ್ಕ್’ನಲ್ಲಿ ಉಗ್ರಂ ಮಂಜು ಹಾಗೂ ಚೈತ್ರಾ ಸೋತು ಹೋದ್ರಾ..? ಛೀಮಾರಿ ಹಾಕಿದ ಇಡೀ ಮನೆ

ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ ಆಟ 90 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ಬಾಸ್ ಮನೆಯಿಂದ ಐಶ್ವರ್ಯ ಸಿಂಧೋಗಿ ನಿನ್ನೆ ಹೊರ ಬಂದಿದ್ದಾರೆ. ಬರೋಬ್ಬರಿ 93 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಅವರು ವೀಕ್ಷಕರನ್ನು, ತಮ್ಮ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಮನೆಯಲ್ಲಿ ಹೊಸದೊಂದು ಟಾಸ್ಕ್ ಶುರು ಮಾಡಲಾಗಿದ್ದು 2ನೇ ವಾರ ಕ್ಯಾಪ್ಟನ್ ಆಗಿರುವ ಭವ್ಯ ಈ ಕುರಿತು ಓದಿ ಹೇಳಿದ್ದಾರೆ. ದಿನಸಿ ಸಾಮಾಗ್ರಿಗಳನ್ನು ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ಭವ್ಯ ತಿಳಿಸಿದ್ದಾರೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಈ ವೇಳೆ ಮಂಜು ಯಾವುದೇ ಟಾಸ್ಕ್ ಕೊಟ್ಟರೂ ನಾವು ಆಡಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.
ಅದರಲ್ಲಿ ಉಗ್ರಂ ಮಂಜು ಅವರು ಟಾಸ್ಕ್ನ ಕಾನ್ಫಿಡೆನ್ಸ್ನಿಂದ ಆಡುವುದಾಗಿ ಹೋಗಿದ್ದರು. ಆದರೆ, ಅವರು ಯೋಚಿಸಿದಂತೆ ಅಲ್ಲಿ ಯಾವುದೂ ನಡೆದಿಲ್ಲ. ಅವರು ಹಠ ಹಿಡಿದು ಆಡಿದ ಟಾಸ್ಕ್ನಲ್ಲಿ ಸೋತಿದ್ದಾರೆ. ಇದರಿಂದ ಇಡೀ ಮನೆ ಅವರಿಗೆ ಛೀಮಾರಿ ಹಾಕಿದೆ. ಸದ್ಯ ಈ ವಿಚಾರ ದೊಡ್ಮನೆಯಲ್ಲಿ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






