Chitradurga: ವಿದ್ಯಾರ್ಥಿನಿ ಹತ್ಯೆ ಕೇಸ್ʼಗೆ ಟ್ವಿಸ್ಟ್: ಮದುವೆಯಾಗು ಅಂದವಳನ್ನೇ ಕೊಂದಿದ್ಯಾಕೆ ಈ ಪ್ರೇಮಿ..?

ಆಗಸ್ಟ್ 20, 2025 - 22:05
 0  72
Chitradurga: ವಿದ್ಯಾರ್ಥಿನಿ ಹತ್ಯೆ ಕೇಸ್ʼಗೆ ಟ್ವಿಸ್ಟ್: ಮದುವೆಯಾಗು ಅಂದವಳನ್ನೇ ಕೊಂದಿದ್ಯಾಕೆ ಈ ಪ್ರೇಮಿ..?

ಚಿತ್ರದುರ್ಗ: ಚಿತ್ರದುರ್ಗ ವಿದ್ಯಾರ್ಥಿನಿ ಕೊಲೆ ಕೇಸ್ ಗೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ಮುಂದೆ ಕೊಲೆ ರಹಸ್ಯ ಆರೋಪಿ ಚೇತನ್  ಬಾಯ್ಬಿಟ್ಟಿದ್ದಾನೆಹೌದು ಚೇತನ್ ಕೃತ್ಯವನ್ನು ತಾನು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರ ನಡುವೆ ಆರೋಪಿಯಾಗಿರುವ ಚೇತನ್ಗೆ ಕ್ಯಾನ್ಸರ್ಮೂರನೇ ಹಂತದಲ್ಲಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ (19) ಎಂಬಾಕೆಯನ್ನ ಆತನ ಪ್ರಿಯಕರನೇ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಚೇತನ್ ಎಂಬಾತನನ್ನು ಕೂಡ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ ಚೇತನ್ಅನೇಕ ವಿಚಾರ ಬಾಯ್ಬಿಟ್ಟಿದ್ದಾನೆ, ಆಕೆ ನಾನು ಗರ್ಭಿಣಿ ಆಗಿದ್ದೇನೆ, ನನ್ನನ್ನು ಮದುವೆಯಾಗು ಎಂದು ಚೇತನ್ ಬಳಿ ಆಕೆ ಪಟ್ಟು ಹಿಡಿದಿದ್ದಳು ಎನ್ನಲಾಗ್ತಿದೆ. ​ಆಕೆ ಬೇರೋಬ್ಬ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಚೇತನ್ಆರೋಪ ಮಾಡಿದ್ದಾನೆ ಎನ್ನಲಾಗ್ತಿದೆ.

ಅಕ್ರಮ ಸಂಬಂಧ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗ್ತಿದ್ದು,  ಆಕೆಯ ಮೇಲೆ ಚೇತನ್ ಹಲ್ಲೆ ಮಾಡಿ, ಬರ್ಬರವಾಗಿ ಕೊಂದು , ಪೆಟ್ರೋಲ್ ಹಾಕಿ ಸುಟ್ಟುಹಾಕಿದ್ದಾನೆ ಎನ್ನಲಾಗ್ತಿದೆ. ಪ್ರಕರಣದ ವಿಚಾರಣೆ ಸಿಪಿಐ ಮುದ್ದುರಾಜ್ ಮತ್ತು ಡಿವೈಎಸ್ಪಿ ದಿನಕರ್ ಅವರ ನೇತೃತ್ವದಲ್ಲಿ  ಮುಂದುವರಿದಿದೆ.

ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಳು ಎನ್ನಲಾಗ್ತಿದೆ. ದೈಹಿಕ ಸಂಪರ್ಕ ಬೆಳೆಸಿ ಚೇತನ್ ಆಕೆಗೆ ಮೋಸ ಮಾಡಲು ಮುಂದಾಗಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ. ಗರ್ಭಿಣಿಯಾಗಿದ್ದೇನೆ, ಮದುವೆ ಆಗು ಎಂದು ಆಕೆ ಪಟ್ಟು ಹಿಡಿದಿದ್ದಳಂತೆ, ಆದರೆ ಚೇತನ್ ಮದುವೆ ಆಗಲು ನಿರಾಕರಿಸಿದ್ದನಂತೆ. ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಹಲ್ಲೆ ಮಾಡಿದ ಚೇತನ್, ಕೊನೆಗೆ ಆಕೆಯನ್ನ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎಂದು ವರದಿ ಆಗಿದೆ.

ಆರೋಪಿ ಚೇತನ್ ಬಂಧನ ಬಳಿಕ, ಆರೋಪಿ ಕ್ಯಾನ್ಸರ್ ರೋಗಿ ಎಂಬ ಮಾಹಿತಿ ಬಿಡುಗಡೆಯಾಗಿದೆ. ಪ್ರಕರಣದಲ್ಲಿ ವಿದ್ಯಾರ್ಥಿನಿ ಒಂದೇ ಸಿಮ್ ಕಾರ್ಡ್ ಗೆ 16 ಮೊಬೈಲ್ ಬಳಕೆ ಮಾಡಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow