Devil Movie: "ಡೆವಿಲ್" ಹಾಡನ್ನು ಕದ್ದು ಮಾಡಿದ್ರಾ..? ಸಾಂಗ್‌ ಕೇಳಿದ ಫ್ಯಾನ್ಸ್‌ ಫುಲ್‌ ಗರಂ!

ಆಗಸ್ಟ್ 26, 2025 - 16:17
 0  12
Devil Movie: "ಡೆವಿಲ್" ಹಾಡನ್ನು ಕದ್ದು ಮಾಡಿದ್ರಾ..? ಸಾಂಗ್‌ ಕೇಳಿದ ಫ್ಯಾನ್ಸ್‌ ಫುಲ್‌ ಗರಂ!

ಡೆವಿಲ್ ಚಿತ್ರದ ಇದ್ರೇ ನೆಮ್ದಿಯಾಗ್ ಇರ್ಬೇಕ್ ಅನ್ನೋ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಿಲೀಸ್ ಆದ 22 ಗಂಟೆಯಲ್ಲಿಯೇ ಈ ಒಂದು ಹಾಡಿಗೆ 10 ಮಿಲಿಯನ್‌ಗೂ ಹೆಚ್ಚು ವೀವ್ಸ್ ಬಂದಿದೆ. ಅಷ್ಟೊಂದು ಕ್ರೇಜ್ ಕ್ರಿಯೇಟ್ ಮಾಡಿರೋ ಈ ಹಾಡಿಗೆ ರೀಲ್ಸ್‌ಗಳು ಕೂಡ ಕ್ರಿಯೇಟ್ ಆಗಿವೆ.

ಇದರ ನಡುವೆ ಹಾಡಿನ ಮೇಲೆ ಕೃತಿ ಚೌರ್ಯ ಆರೋಪವೂ ಕೇಳಿಬಂದಿದೆ. 2015ರಲ್ಲಿ ಬಿಡುಗಡೆಯಾದ ‘ನಾನು ಅವನಲ್ಲ.. ಅವಳು’ ಸಿನಿಮಾದಲ್ಲಿ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದ ‘ವಾರೆ ವಾರೆ’ ಹಾಡು ಹಾಗೂ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡಿನ ಟ್ಯೂನ್ ನಡುವೆ ಸಾಮ್ಯತೆಯಿದೆ ಎಂದು ಕೆಲವರು ಆರೋಪಿಸಿದ್ದಾರೆ.

https://www.instagram.com/reel/DNvwJQl5DRg/?utm_source=ig_embed&ig_rid=039eba37-4d57-48be-9b0e-f0d4f99f45fb

ಆದರೆ, ದರ್ಶನ್ ಅಭಿಮಾನಿಗಳು ಈ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ. ಇದೇ ಮೊದಲ ಬಾರಿ ಅಜನೀಶ್ ಲೋಕನಾಥ್ ಅವರ ಸಂಗೀತದ ಮೇಲೆ ಚೌರ್ಯ ಆರೋಪ ಕೇಳಿಬಂದಿಲ್ಲ. ಮುಂಚೆಯೂ ಅವರ ಸಂಯೋಜನೆಯ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಮೇಲೂ ಇಂತಹದ್ದೇ ವಿವಾದ ಉಂಟಾಗಿತ್ತು.

‘ಡೆವಿಲ್’ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶಿಸಿದ್ದು, ಬಂಡವಾಳವೂ ಹೂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow