Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲಿನ ಆರೈಕೆಗೂ ಒಳ್ಳೆಯದು!

ಎಲ್ಲಾ ಋತುವಿನಲ್ಲಿ ದಾಸವಾಳ ಹೂ ಬಿಡುತ್ತದೆ. ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳ ಬಳಕೆ ಮಾಡಲಾಗುತ್ತದೆ. ದಾಸವಾಳ ಹೂವು, ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧದ ಬಳಕೆಯಾಗುತ್ತದೆ. ದಾಸವಾಳ ಹೂವು ಸೌಂದರ್ಯವರ್ಧಕ ಮತ್ತು ಔಷಧೀಯ ಪದಾರ್ಥಗಳ ತಯಾರಿಕೆಗೆ ಸಹಕಾರಿ.
ದಾಸವಾಳ ಎಲೆ ಇರಲಿ ಅದರ ಹೂವಿರಲಿ, ಕೆಲವರು ಅದರ ಮಾಸ್ಕ್(Mask) ತಯಾರಿಸಿಕೊಂಡು ತಲೆಗೆ ಹಚ್ಚುತ್ತಾರೆ. ಇದು ಈಗಿನ ಟ್ರೆಂಡ್ ಅಲ್ಲ ನಮ್ಮ ಹಿರಿಯರು ತಮ್ಮ ಕೂದಲ ಆರೈಕೆ ಮಾಡಿಕೊಂಡು ಬಂದ ರೀತಿ. ಅವರೆಲ್ಲಾ ವಾರದಲ್ಲೊಂದು ಬಾರಿ ದಾಸವಾಳದ ಮಾಸ್ಕ್ ಮನೆಯಲ್ಲೇ ಮಾಡಿಕೊಂಡು ಸೀಗೆ ಕಾಯಿ ಅಥವಾ ಅಂಟವಾಳ ಕಾಯಿ ಬಳಸಿ ತಲೆ ಸ್ನಾನ ಮಾಡುತ್ತಿದ್ದರು.
ಇದರಿಂದ ಅವರ ಕೂದಲು ದಷ್ಟಪುಷ್ಟವಾಗಿ(Strong) ಹಾವಿನಂತರೆ ಉದ್ದವಾಗಿ(Long Hairs) ಬೆಳೆಯುತ್ತಿತ್ತು. ನೋಡಿದರೆ ಅಬ್ಬಾ ಅನಿಸುತ್ತಿತ್ತು. ದಾಸವಾಳ ಹೂವಿನ ಪ್ರಯೋಜನಗಳ ಬಗ್ಗೆ ಅರಿತೆ ನಮಗೂ ಈ ರೀತಿಯ ಕೂದಲು ಬೇಕೆಂದು ಅನಿಸುವುದು ಸುಳ್ಳಲ್ಲ. ಆಯುರ್ವೇದದಲ್ಲೂ ಇದರ ಮಹತ್ವದ ಬಗ್ಗೆ ತಿಳಿಸಿದ್ದು, ದಾಸವಾಳ ಹೂವಿನಿಂದ ಕೂದಲಿಗೆ ಏನೆಲ್ಲಾ ಉಪಯೋಗವಾಗುತ್ತೇ? ಅದನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಪ್ರಯೋಜನಗಳು
1 ದಾಸವಾಳ ಹೂವಿನಲ್ಲಿ ಅಮಿನೋ ಆಸಿಡ್(Amino Acid) ಹೇರಳವಾಗಿದೆ. ವಾರದಲ್ಲಿ ಎರಡು ಬಾರಿ ಈ ಹೂವನ್ನು ಮಾಸ್ಕ್ ರೂಪದಲ್ಲಿ ಬಳಸಿದರೆ ದಾಸವಾಳ ಹೂವು ಕೂದಲಿಗೆ ಪ್ರಮುಖವಾಗಿ ಬೇಕಾಗುವ ಅಮಿನೊ ಆಸಿಡ್ ಅನ್ನು ಒದಗಿಸುತ್ತದೆ ಇದರಿಂದ ಕೂದಲಿನ ದಟ್ಟಣೆ ಹೆಚ್ಚಿಸಬಹುದು ಹಾಗೂ ಕೂದಲು ಉದುರುವುದನ್ನು ತಡೆಯಬಹುದು. ಈ ಅಮಿನೋ ಆಸಿಡ್ ಕೆರಾಟಿನ್ ಎಂಬ ವಿಶೇಷ ರೀತಿಯ ರಚನಾಯತ್ಮಕ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ.
ಕೆರಾಟಿನ್ ಅಂಶವೂ ಕೂದಲನ್ನು ಕಟ್ಟಿಹಾಕುವುದಲ್ಲದೆ, ಒಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲಿನ ದಪ್ಪವನ್ನು ಹೆಚ್ಚಿಸುವಂತೆ ಮಾಡುತ್ತದೆ. ಹಾಗಾಗಿ ಹೊರಗಡೆ ಕೆರಾಟಿನ್ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಬದಲು ಮನೆಯಲ್ಲೇ ದಾಸವಾಳ ಹೂವಿನ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳಬಹುದು.
- ದೈನಂದಿನ ಜೀವನದಲ್ಲಿ ನಾವು ಬಳಸುವ ಶಾಂಪೂವಿನಲ್ಲಿತಲೆ ಕೂದಲಲ್ಲಿನ ಎಣ್ಣೆ ಅಂಶವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಕೆಮಿಕಲ್ ಇರುತ್ತದೆ. ಇದರಿಂದ ಕೂದಲು ಶುಷ್ಕ ಮತ್ತು ಮಂದವಾಗುತ್ತದೆ. ದಾಸವಾಳ ಹೂವನ್ನು ಬಳಸಿದರೆ ಕೂದಲನ್ನು ಪೋಷಿಸಲು ಮತ್ತು ಅದರ ನೈಸರ್ಗಿಕ ತೇವಾಂಶವನ್ನು ಕಾಯ್ದುಕೊಳ್ಳಬಹುದು. ಏಕೆಂದರೆ ದಾಸವಾಳ ಹೂವು ಹಾಗೂ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮ್ಯುಸಿಲೇಜ್(Musilage) ಅಂಶವಿದೆ ಅಂದರೆ ಲೋಳೆ ಅಂಶ ಹೆಚ್ಚಿದ್ದು, ಕೂದಲಿಗೆ ಕಂಡೀಷನರ್ಆ ಗಿ ಕೆಲಸ ಮಾಡುತ್ತದೆ.
- ಹಲವು ಅಧ್ಯಾಯನದ ಪ್ರಕಾರ ದಾಸವಾಳ ಎಲೆ ಹಾಗೂ ಹೂವು ಬಳಸುವುದರಿಂದ ಬೊಕ್ಕು ತಲೆಯಾಗುವುದನ್ನು(Baldness) ತಡೆಗಟ್ಟಬಹುದು ಎಂದು ತಿಳಿದುಬಂದಿದೆ. ದಾಸವಾಳವು ಕೂದಲು ಮತ್ತೆ ಚಿಗುರುವಂತೆ ಮಾಡುವ ಗುಣವಿದೆ ಎಂದು ಹೇಳಲಾಗಿದೆ. ಇಂದು ಬೊಕ್ಕು ತಲೆಗೆ ಹಲವು ಚಿಕಿತ್ಸೆಗಳಿದ್ದು, ಅದರಲ್ಲಿ ಡ್ರಗ್ಸ್(Drugs) ಅಂಶ ಹೆಚ್ಚಿರುತ್ತದೆ. ಆದರೆ ನೈಸರ್ಗಿಕವಾಗಿ ಸಿಗುವ ದಾಸವಾಳವನ್ನು ಬಳಸಿದರೆ ಯಾವುದೇ ರೀತಿಯ ಸೈಡ್ ಎಫೆಕ್ಸ್(Side Effects) ಇರುವುದಿಲ್ಲ ಹಾಗೂ ಉತ್ತಮ ಫಲಿತಾಂಶ ಪಡೆಯಬಹುದು.
- ತೆಲೆ ಹೊಟ್ಟು(Dandruff) ಮತ್ತು ಬುರುಡೆಯಲ್ಲಿ ತುರಿಕೆ ಸಮಸ್ಯೆ, ಎಣ್ಣೆ ಸರುವಿಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ದಾಸವಾಳ ಉತ್ತಮ ಪರಿಹಾರ ಎಂದು ಹೇಳಲಾಗುತ್ತದೆ. ಏಕೆಂದರೆ ಗ್ರಂಥಿಗಳಿAದ ತೈಲ ಸ್ರವಿಸುವಿಕೆಯನ್ನು ತಡೆಗಟ್ಟುತ್ತದೆ. ಕೂದಲಿನ ಪಿಎಚ್(ಪೊಟೆಂನ್ಶಿಯಲ್ ಹೈಡ್ರೋಜನ್(Potential Hydrogen) ಲೆವೆಲ್ ಸಮತೋಲನ ಮಾಡುತ್ತದೆ. ಅಲ್ಲದೆ ತಲೆಯನ್ನು ಹಿತ ಮತ್ತು ತಂಪಾಗಿಸುತ್ತದೆ(Cool).
- ನೈಸರ್ಗಿಕವಾಗಿ ದಾಸವಾಳವನ್ನು ಮಾಸ್ಕ್(Mask) ರೀತಿಯಲ್ಲಿ ಬಳಸಲಾಗುತ್ತದೆ. ಇದರಿಂದ ಕೂದಲು ಬಿಳಿಯಾಗುವುದನ್ನು(Grey Hair) ತಡೆಯಬಹುದು. ದಾಸವಾಳದಲ್ಲಿ ಆಂಟಿ ಆಕ್ಸಿಡೆಂಟ್(Antioxidant) ಮತ್ತು ವಿಟಮಿನ್(Vitamin) ಹೆಚ್ಚಿದ್ದು, ಮೆಲನಿನ್(Melanin) ಅನ್ನು ಉತ್ಪಾದಿಸುತ್ತದೆ. ನೈಸರ್ಗಿಕವಾಗಿ ಸಂಭವಿಸುವ ವರ್ಣದ್ರವ್ಯವು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






