Virat Kohli: ವಿರಾಟ್ ಕೊಹ್ಲಿ 10ನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ವೈರಲ್! ಗಣಿತದ ಮೇಲೆ ಎಲ್ಲರ ಕಣ್ಣು

ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು, ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಎಲ್ಲಾ ಮಾದರಿಗಳಲ್ಲಿ ಸಾಟಿಯಿಲ್ಲದ ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿಯ ಹತ್ತನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ: ವಿರಾಟ್ ಕೊಹ್ಲಿಯನ್ನು ಇಂದಿನ ಕ್ರಿಕೆಟ್‌ನ ಮುಖವೆಂದು ಪರಿಗಣಿಸಲಾಗಿದೆ. ಕ್ರಿಕೆಟ್‌ನ ರಾಜ ವಿರಾಟ್ ಕೊಹ್ಲಿ ಮುರಿಯದ ಯಾವುದೇ ದಾಖಲೆ ಇಲ್ಲ.
ಕೊಹ್ಲಿ ಹತ್ತನೇ ತರಗತಿಯಲ್ಲಿ ಗಳಿಸಿರುವ ಅಂಕಗಳನ್ನು ನೋಡುವುದಾದರೆ, ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81, ಇಂಟ್ರಡಕ್ಟರಿ ಐಟಿಯಲ್ಲಿ 74 ಅಂಕಗಳನ್ನು ಪಡೆದಿದ್ದಾರೆ.
ಈ ಅಂಕಪಟ್ಟಿಯನ್ನು ಗಮನಿಸುವುದಾದರೆ ವಿರಾಟ್ ಕೊಹ್ಲಿ ಗಣಿತದಲ್ಲಿ ಕೇವಲ 51 ಅಂಕಗಳನ್ನು ಪಡೆದಿದ್ದು, ಕ್ರಿಕೆಟ್ ಲೋಕದ ಸಾಮ್ರಾಟ ಗಣಿತದಲ್ಲಿ ಅಷ್ಟು ಪರಿಣಿತರಾಗಿರಲಿಲ್ಲ ಎಂಬುದನ್ನು ಕಾಣಬಹುದಾಗಿದೆ.
ನನಗೆ ಶಾಲಾ ದಿನಗಳಲ್ಲಿ ಗಣಿತ ವಿಷಯ ಕಂಡರೆ ಆಗುತ್ತಿರಲಿಲ್ಲ ಎಂಬುದನ್ನು ಸ್ವತಃ ಕೊಹ್ಲಿಯೇ ಈ ಹಿಂದೆ ಹೇಳಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಏಕೆ ಗಣಿತವನ್ನು ಏಕೆ ಅಧ್ಯಯನ ಮಾಡಲು ಬಯಸುತ್ತಾರೆ. ಇದರಿಂದ ಅವರಿಗೆ ಏನು ಸಿಗುತ್ತದೆ?. ಸದ್ಯ ನನಗೆ 10ನೇ ತರಗತಿಯಲ್ಲಿ ಗಣಿತದಲ್ಲಿ ಪಾಸ್ ಆಗುವುದೇ ಮುಖ್ಯವಾಗಿತ್ತು. ಏಕೆಂದರೆ 10ನೇ ತರಗತಿ ಮುಗಿದ ನಂತರ ಗಣಿತವನ್ನು ಓದುವ ಅನಿವಾರ್ಯವಿರಲಿಲ್ಲ ಎಂದು ಕೊಹ್ಲಿಯೇ ಹೇಳಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






