ಅತ್ಯಾಚಾರ ಕೇಸ್: ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಕೆ.ಆರ್.ನಗರ ಮೂಲದ ತಮ್ಮ ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವನವಿಧಿ ಜೈಲು ಶಿಕ್ಷೆ ಹಾಗೂ ₹5 ಲಕ್ಷ ರೂ. ದಂಡ ವಿಧಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 376 (2)(K) ಹಾಗೂ 376 (2)(N) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಿನ್ನೆ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಘೋಷಿಸಿತ್ತು. ಇಂದು ಶಿಕ್ಷೆ ಪ್ರಮಾಣ ಕುರಿತು ವಿಚಾರಣೆ ನಡೆದಿದ್ದು, ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಪೀಠ ತೀರ್ಪು ಪ್ರಕಟಿಸಿದೆ.
ಶಿಕ್ಷೆ ಪ್ರಮಾಣ ಕುರಿತಾಗಿ ಸರ್ಕಾರಿ ಪರ ವಕೀಲರಾದ ಎನ್. ಜಗದೀಶ್ ಮತ್ತು ಅಶೋಕ್ ನಾಯಕ್, ಹಾಗೂ ಪ್ರಜ್ವಲ್ ಪರ ವಕೀಲರಾದ ನಳಿನಿ ಮಾಯಾಗೌಡ ವಾದ-ಪ್ರತಿವಾದ ಮಂಡಿಸಿದ್ದರು.
ತೀರ್ಪಿನ ಭಾಗವಾಗಿ, ನ್ಯಾಯಾಲಯ ಸಂತ್ರಸ್ತೆ ಮಹಿಳೆಗೆ ₹7 ಲಕ್ಷ ಪರಿಹಾರ ಘೋಷಿಸಿದ್ದು, ತಕ್ಷಣದಿಂದಲೇ ಶಿಕ್ಷೆ ಜಾರಿಗೆ ಬರುವಂತೆ ಆದೇಶಿಸಿದೆ. ಈ ಮೂಲಕ, ನ್ಯಾಯಾಲಯ ಗಂಭೀರ ಅತ್ಯಾಚಾರ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ವಿಧಿಸಿದೆ.ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಮೂರು ಲೈಂಗಿಕ ಅಪರಾಧ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
ನಿಮ್ಮ ಪ್ರತಿಕ್ರಿಯೆ ಏನು?






