ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ! ನಿಮಗೆ ನಷ್ಟ ಗ್ಯಾರಂಟಿ

ನವೆಂಬರ್ 22, 2024 - 07:00
 0  14
ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ! ನಿಮಗೆ ನಷ್ಟ ಗ್ಯಾರಂಟಿ

ಹಿಂದೂ ಧರ್ಮದಲ್ಲಿ, ಪ್ರತಿ ವಾರದ ಪ್ರತಿ ದಿನವೂ ಒಂದಲ್ಲ ಒಂದು ದೇವತೆಯನ್ನು ಪೂಜಿಸಲಾಗುತ್ತದೆ. ಶುಕ್ರವಾರ ಲಕ್ಷ್ಮಿ ದೇವಿಯನ್ನು, ಕಾಳಿ ದೇವಿಯನ್ನು ಮತ್ತು ಸಂತೋಷಿ ಮಾತಾಳಿಗೆ ಸಮರ್ಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಹಣ ಪಡೆಯುವ ಆಸೆ ಇರುತ್ತದೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದ ವ್ಯಕ್ತಿಗೆ ಜೀವನದಲ್ಲಿ ಯಾವುದೇ ಕೊರತೆಯಿರುವುದಿಲ್ಲ ಎಂದು ಹೇಳಲಾಗುತ್ತದೆ. ಶುಕ್ರವಾರವನ್ನು ಲಕ್ಷ್ಮಿ ಮತ್ತು ಶುಕ್ರ ಗ್ರಹಕ್ಕೆ ಸಮರ್ಪಿಸಲಾಗಿದೆ.  ಶುಕ್ರವಾರ ಈ ಎರಡು ದೇವರು ಕೃಪೆ ತೋರುವ ಕೆಲಸ ಮಾಡಬೇಕು. ಅವರು ಕೋಪಗೊಳ್ಳುವ ಯಾವುದೇ ಕೆಲಸವನ್ನು ಮಾಡಬಾರದು. 

ಶುಕ್ರವಾರ ಶುಕ್ರನ ಕೋಪಕ್ಕೆ ಕಾರಣರಾಗಬೇಡಿ ಇಂದು ಶುಕ್ರವಾರ. ಈ ದಿನ ಕೆಲವು ವಿಶೇಷ ಪರಿಹಾರಗಳನ್ನು ಮಾಡುವ ಮೂಲಕ ಜಾತಕದಲ್ಲಿ ಶುಕ್ರ ಗ್ರಹವನ್ನು ಬಲಪಡಿಸಿಕೊಳ್ಳಬಹುದು. ಆದ್ರೆ ಅಪ್ಪಿತಪ್ಪಿ ಈ ದಿನ ತಪ್ಪು ಮಾಡಿದ್ರೆ, ಶುಕ್ರನನ್ನು ಕೋಪಕ್ಕೆ ಗುರಿ ಮಾಡಿದ್ರೆ ಜಾತಕದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

ಶುಕ್ರವಾರದಂದು ಹಣದ ವಹಿವಾಟು ಬೇಡ ಧಾರ್ಮಿಕ ನಂಬಿಕೆಯ ಪ್ರಕಾರ, ಹಣದ ವಹಿವಾಟುಗಳನ್ನು ಶುಕ್ರವಾರ ಮಾಡಬಾರದು. ಏಕೆಂದರೆ ಶುಭ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಮೀಸಲಿಡಲಾಗಿದೆ. ಹಣ ಲಕ್ಷ್ಮಿಯ ಸ್ವರೂಪ. ಹೀಗಾಗಿ ಈ ದಿನ ಹಣವ ವಹಿವಾಟು ಮಾಡಬಾರದು. ಈ ದಿನ ನಾವು ಯಾರಿಗಾದ್ರು ಹಣ ನೀಡಿದರೆ ಲಕ್ಷ್ಮಿ ನಮಿಂದ ದೂರ ಹೋಗುತ್ತಾಳೆ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತೆ.

ಹುಡುಗಿಯರು, ಮಹಿಳೆಯರು ಮತ್ತು ನಪುಂಸಕರನ್ನು ಅವಮಾನಿಸಬೇಡಿ ಭಾರತೀಯ ಸಂಪ್ರದಾಯದ ಪ್ರಕಾರ, ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಯನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶುಕ್ರವಾರದಂದು ಹುಡುಗಿ, ಮಹಿಳೆ, ಅಥವಾ ನಪುಂಸಕರನ್ನು ಅವಮಾನಿಸಬಾರದು. ಅವರಿಗೆ ಉಡುಗೊರೆ ನೀಡಿ ಖುಷಿ ಪಡಿಸಬೇಕು. ಅವರಿಂದ ಆಶೀರ್ವಾದ ಪಡೆಯಬೇಕು. ಇನ್ನು ಶುಕ್ರವಾರ ಮನೆಯಲ್ಲಿ ಹೆಣ್ಣು ಮಕ್ಕಳು ಅತ್ತರೆ ಮನೆಗೆ ಒಳ್ಳೆಯದಾಗಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ.

ಸಕ್ಕರೆ ನೀಡುವುದನ್ನು ತಪ್ಪಿಸಿ ಧರ್ಮಗ್ರಂಥಗಳ ಪ್ರಕಾರ, ಸಕ್ಕರೆ ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ, ಆದ್ದರಿಂದ ಶುಕ್ರವಾರ ಯಾರಿಗಾದರೂ ಸಕ್ಕರೆ ನೀಡಿದರೆ ಆ ವ್ಯಕ್ತಿಯ ಜಾತಕದಲ್ಲಿ ಶುಕ್ರ ದುರ್ಬಲನಾಗುತ್ತಾನಂತೆ. ಆ ವ್ಯಕ್ತಿಯ ಜೀವನದಲ್ಲಿ ಸಂತೋಷ, ಆರ್ಥಿಕ ಸಮೃದ್ಧಿ ಕಡಿಮೆಯಾಗುತ್ತದೆ.

ಹುಳಿ ತಿನ್ನಬಾರದು ಶುಕ್ರವಾರ ಉಪವಾಸ ಮಾಡುವವರು ಹುಳಿ ಪದಾರ್ಥಗಳನ್ನು ಸೇವಿಸಬಾರದು. ಇದನ್ನು ಮಾಡುವುದರಿಂದ, ಅವರು ಉಪವಾಸದ ಪೂರ್ಣ ಫಲವನ್ನು ಪಡೆಯುವುದಿಲ್ಲ. ಜೊತೆಗೆ ಶುಕ್ರವಾರ ಯಾವುದೇ ಹುಳಿ ಪದಾರ್ಥವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದರಿಂದ ತಾಯಿ ಸಂತೋಷಿ ಮಾತ ಸಿಟ್ಟಿಗೇಳುತ್ತಾಳೆ.

ಶುಕ್ರವಾರಗಳಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಶುಕ್ರವಾರದಂದು ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ದೇವತೆಗಳು ಸಂತೋಷಗೊಂಡು ಅವರ ಕೃಪೆಗೆ ಪಾತ್ರರಾಗುತ್ತೀರಿ. ಲಕ್ಷ್ಮಿ ದೇವಿಯ ಕೃಪೆ ಜೀವನದಲ್ಲಿ ಉಳಿಯುತ್ತದೆ. ಐಶ್ವರ್ಯ ವೃದ್ಧಿಯಾಗುತ್ತದೆ. ಹಾಗೂ ಸಂತೋಷಿ ಮಾತಾ ಕೃಪೆಯಿಂದ ಸಂತೋಷ, ನೆಮ್ಮದಿ ನೆಲೆಸುತ್ತದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow