ಅಭಿಮಾನಿಗಳಿಗೆ ಬಿಗ್ ಶಾಕ್: ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಾ ಶಿವಣ್ಣ!?

ದೊಡ್ಮನೆಗೆ ಮತ್ತೊಂದು ಆಘಾತ ಎದುರಾಗಿದ್ದು, ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಮಾರಣಾಂತಿಕ ಕ್ಯಾನ್ಸರ್‌ನಿಂದ ಶಿವಣ್ಣ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಮ್ಮ ನೆಚ್ಚಿನ ನಟ ಮಂಕಾಗಿರುವುದನ್ನೆ ಸಹಿಸಲಾಗದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ನಟ ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಸಮಸ್ಯೆ ಕಾಡುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಿವಣ್ಣ ಅವರು ತಮ್ಮ ಆರೋಗ್ಯ ಸಮಸ್ಯೆಯ ಕುರಿತು ಮನಬಿಚ್ಚಿ ಮಾತನಾಡಿದ್ದರು, ಈ ಸಂದರ್ಭದಲ್ಲಿ ಅವರು "ನಾನು ಕೂಡ ಮನುಷ್ಯ ನನಗೂ ಕೂಡ ಆರೋಗ್ಯ ಸಮಸ್ಯೆಗಳು ಬಂದು ಹೋಗುತ್ತವೆ, ಆದರೆ ಇದನ್ನು ನಾನು ನನ್ನ ಅಭಿಮಾನಿಗಳಿಂದ ಮುಚ್ಚಿಡುವುದಿಲ್ಲ" ಎಂದಿದ್ದಾರೆ.
ತಾವು ಈ ಕ್ಯಾನ್ಸರ್ ಕಾಯಿಲೆಗಾಗಿ ಸದ್ಯ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಿದ್ದು, ಇನ್ನೂ 4 ಸೆಷನ್‌ಗಳಲ್ಲಿ ಟ್ರೀಟ್‌ಮೆಂಟ್ ಪಡೆಯಬೇಕಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಶಿವಣ್ಣ ಅವರನ್ನು ಕಾಡುತ್ತಿರುವುದು, ಮೂತ್ರಕೋಶದ ಕ್ಯಾನ್ಸರ್. ಇದನ್ನು ಸ್ವತಃ ಶಿವಣ್ಣ ಅವರ ಬಿಚ್ಚಿಟ್ಟಿದ್ದು, ತಮ್ಮ ಅಭಿಮಾನಿಗಳಿಗೂ ಕೂಡ ಈ ಕುರಿತು ಗೊತ್ತಿರಬೇಕು ಎಂದು ಈ ಕುರಿತು ಕ್ಲಾರಿಟಿ ಕೊಟ್ಟಿದ್ದಾರೆ.
ಶಿವಣ್ಣ ಅವರ ಆರೋಗ್ಯ ಸಮಸ್ಯೆ ನಿನ್ನೆ ಮೊನ್ನೆಯದಲ್ಲ, ಸ್ಟಾರ್ ನಟನಿಗೆ ಈ ಆರೋಗ್ಯ ಸಮಸ್ಯೆ ಇರುವುದು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಹಲವರಿಗೆ ಗೊತ್ತು, ಯಶ್, ಸುದೀಪ್ ಹಾಗೂ ರಕ್ಷಿತ್ ಎಲ್ಲರಿಗೂ ಇ ಕುರಿತು ಗೊತ್ತಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






