ಅಮವಾಸ್ಯೆ ತೇಜಸ್ವಿ ಸೂರ್ಯ ಕರ್ನಾಟಕಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ!

ಅಕ್ಟೋಬರ್ 21, 2025 - 16:02
 0  11
ಅಮವಾಸ್ಯೆ ತೇಜಸ್ವಿ ಸೂರ್ಯ ಕರ್ನಾಟಕಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ!

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಧ್ವನಿಯೆತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಬಿಜೆಪಿ ಸಂಸದರ ನಿರ್ಲಕ್ಷ್ಯಕ್ಕೆ ತೀವ್ರ ಟಾಂಗ್ ನೀಡಿದರು. "ಕೇಂದ್ರದ ಬಳಿ ಕರ್ನಾಟಕಕ್ಕೆ ಕೊಡಬೇಕಾದ ಹಣ ಕೇಳೋದಿಲ್ಲ, ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಕೂಡ ಹಣ ತರಲ್ಲ" ಎಂದು ವಾಗ್ದಾಳಿ ನಡೆಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ವೈಟ್‌ಟಾಪಿಂಗ್ ಹಾಗೂ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿ.ವಿ.ಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿಪೂಜೆ ನೆರವೇರಿಸಿದ ಬಳಿಕ ಸಿಎಂ ಮಾತನಾಡಿದರು.

ಸಂಸದರು ಕೇಂದ್ರದ ಬಳಿ ಹಣ ಕೇಳೋದಿಲ್ಲ. ಪಿಸಿ ಮೋಹನ್ ಕೇಳಲಿಲ್ಲ, ತೇಜಸ್ವಿ ಸೂರ್ಯ ಕೇಳಲಿಲ್ಲ, ಶೋಭಾ ಕರಂದ್ಲಾಜೆ ಕೂಡ ಹಣ ತರಲಿಲ್ಲ. ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ ಕೂಡ ಹಣ ಕೇಳಿಲ್ಲ. ಆದ್ದರಿಂದ ಇಂತಹ ಸಂಸದರನ್ನು ಸೋಲಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಒಂದು ರೂಪಾಯಿ ತೆರಿಗೆ ಕೊಡ್ತೇವೆ, ಅದರಲ್ಲಿ ಕೇವಲ 14-15 ಪೈಸೆ ಮಾತ್ರ ರಾಜ್ಯಕ್ಕೆ ವಾಪಸ್ ಬರುತ್ತದೆ. ಇನ್ನು ಕೇಂದ್ರದವರು ಅದನ್ನೇ ನಮ್ಮ ಹಣ ಅಂತಾ ಹೆಮ್ಮೆಪಡುವರು. ಎಂಟು ವರ್ಷ ತೆರಿಗೆ ವಸೂಲಿ ಮಾಡಿ, ಈಗ ಜಿಎಸ್‌ಟಿ ಇಳಿಕೆಯನ್ನು ದೀಪಾವಳಿ ಗಿಫ್ಟ್ ಅಂತಾ ಬ್ಯಾನರ್ ಹಾಕಿಕೊಳ್ಳುತ್ತಿದ್ದಾರೆ. ಯಾವ ದೀಪಾವಳಿ ಗಿಫ್ಟ್ ಅಪ್ಪ ಇದು?" ಎಂದು ಟಾಂಗ್ ನೀಡಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow