ಆಘಾತಕಾರಿ ಘಟನೆ: ಪಬ್ ನಲ್ಲೇ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ- ಆರೋಪಿ ಅರೆಸ್ಟ್!

ಜೂನ್ 24, 2025 - 22:01
 0  11
ಆಘಾತಕಾರಿ ಘಟನೆ: ಪಬ್ ನಲ್ಲೇ  ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ- ಆರೋಪಿ ಅರೆಸ್ಟ್!

ಬೆಂಗಳೂರು:- ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಲ್ಲಿ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಕಬ್ಬನ್ ಪಾರ್ಕ್ ಬಳಿಯ ಪಬ್‌ ಒಂದರಲ್ಲಿ ಜರುಗಿದೆ. ಅನುರಾಗ್ ಬಂಧಿತ ಆರೋಪಿ. 

ಖಾಸಗಿ ಕಂಪನಿಯಲ್ಲಿ ಯುವತಿ ಮತ್ತು ಬಂಧಿತ ಅನುರಾಗ್ ಇಬ್ಬರು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಚಯದ ಮೇಲೆ ಕಬ್ಬನ್ ಪಾರ್ಕ್ ಬಳಿಯ ಪಬ್‌ವೊಂದಕ್ಕೆ ಪಾರ್ಟಿಗೆ ಹೋಗಿದ್ದರು. ಪಾರ್ಟಿ ವೇಳೆ ಕುಡಿತದ ಮತ್ತಿನಲ್ಲಿ, ಯುವತಿ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. 

ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಇಬ್ಬರು ಪರಿಚಿತರಾಗಿದ್ದು, ಕುಡಿತದ ನಶೆಯಲ್ಲಿ ಈ ಕೃತ್ಯಕ್ಕೆ ಯತ್ನ ನಡೆಸಲಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow