ಈ ಸರ್ಕಾರದಲ್ಲಿ ಪ್ರತಿ ನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಲೂಟಿ ಹೊಡೆಯುತ್ತಿದ್ದಾರೆ: ಆರ್. ಅಶೋಕ್

ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್, ಈ ಸರ್ಕಾರದಲ್ಲಿ ಪ್ರತಿ ನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಲೂಟಿ ಹೊಡೆಯುತ್ತಿದ್ದಾರೆ. 40 ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ ಎಂದಿದ್ದರು. ತೆರೆದ ಪುಸ್ತಕ ಎಂದವರು ಲೋಕಾಯುಕ್ತ ವಿಚಾರಣೆಗೆ ಹೋಗಿದ್ದಾರೆ. ಮುಖ್ಯಮಂತ್ರಿ ಆಗಿ ವಿಚಾರಣೆ ಎದುರಿಸುತ್ತಿದ್ದಾರೆ, ನಾಚಿಕೆ ಆಗಲ್ವಾ ಎಂದು ಅಶೋಕ್ ಪ್ರಶ್ನಿಸಿದರು.
ಬೆಳಗ್ಗೆ ವಿಚಾರಣೆ ಅಂತೆ, ಮಧ್ಯಾಹ್ನ ಪ್ರಚಾರ ಅಂತೆ. ಸಿಎಂ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ಹೋಗಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ, ನಮ್ಮ ವಿರುದ್ಧ ಹಿಂದೆ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಾವು ನಿಮ್ಮನ್ನು ಸನ್ಮಾನ ಮಾಡಲು ಆಗಲಿಲ್ಲ. ಈಗ ಪೇಸಿಎಂ ಪೋಸ್ಟರ್ ಅಂಟಿಸಿದಾಗ ಹೇಳಿ ಬಂದು ಸನ್ಮಾನ ಮಾಡುತ್ತೇವೆ ಎಂದು ಅಶೋಕ್ ವ್ಯಂಗ್ಯವಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?






