ಉಗ್ರರು ನಮ್ಮಲ್ಲೇ ಇರಬಹುದು, ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ? - ʻಕೈʼ ನಾಯಕನ ವಿವಾದ!

ನವದೆಹಲಿ:- ಉಗ್ರರು ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು ಎಂದು ʻಕೈʼ ನಾಯಕ ಚಿದಂಬರಂ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡೋ ಭರದಲ್ಲಿ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಎನ್‌ಐಎ ತನಿಖೆ ಮಾಡಿದೆ ಎಂಬುದನ್ನ ಹೇಳಲು ಸರ್ಕಾರ ಸಿದ್ಧವಿಲ್ಲ. ಅವರು ಭಯೋತ್ಪಾದಕರನ್ನ ಗುರುತಿಸಿದ್ದಾರೆಯೇ? ಅವರು ಎಲ್ಲಿಂದ ಬಂದ್ರು ಅಂತ ಯಾರಿಗೆ ಗೊತ್ತು? ಅವರು ದೇಶದೊಳಗೇ ತರಬೇತಿ ಪಡೆದ, ಮನೆಯಲ್ಲಿ ಬೆಳೆದ ಭಯೋತ್ಪಾದಕರಾಗಿರಬಹುದು. ಪಾಕಿಸ್ತಾನದಿಂದಲೇ ಬಂದವರೆಂದು ಏಕೆ ಭಾವಿಸಿದ್ದೀರಿ? ಅಂತ ಪ್ರಶ್ನೆ ಮಾಡಿದ್ದರು.
ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದವರೆಂದು ಹೇಳೋದಕ್ಕೆ ಯಾವುದೇ ಪುರಾವೆಗಳಿಲ್ಲ. ಭಾರತ ಅನುಭವಿಸಿದ ನಷ್ಟವನ್ನು ಸರ್ಕಾರ ಕೂಡ ಮರೆಮಾಡುತ್ತಿದೆ. ಇಷ್ಟೆಲ್ಲ ಆದ್ರೂ ಸರ್ಕಾರ ದೇಶವನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನ ನಿಲ್ಲಿಸಲಾಗಿದೆ. ಕೊನೆಗೊಳಿಸಿಲ್ಲ ಅಂತ ಪ್ರಧಾನಿ ಹೇಳಿದ್ದಾರೆ. ಹಾಗಿದ್ದರೇ ಕದನ ವಿರಾಮದ ಬಳಿಕ ಕೇಂದ್ರ ಏನು ಕ್ರಮ ತೆಗೆದುಕೊಂಡಿದೆ. ಪಹಲ್ಗಾಮ್‌ನಂತೆ ಮತ್ತೊಂದು ದಾಳಿಯಾದ್ರೆ ತಡೆಯಲು ಮೋದಿ ಸರ್ಕಾರ ಏನು ಕ್ರಮ ಕೈಗೊಂಡಿದೆಯೇ?
ದಾಳಿ ಮಾಡಿದ ಉಗ್ರರು ಎಲ್ಲಿದ್ದಾರೆ? ಉಗ್ರರಿಗೆ ಆಶ್ರಯ ನೀಡಿದ್ದ ಕೆಲವರನ್ನ ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು, ಅವರಿಗೆ ಏನು ಶಿಕ್ಷೆ ಆಯ್ತು? ಇಂತಹ ಹಲವು ಪ್ರಶ್ನೆಗಳಿವೆ. ಇದ್ಯಾವುದರ ಬಗ್ಗೆಯೂ ಕೇಂದ್ರ ಸರ್ಕಾರ ಮಾತನಾಡ್ತಿಲ್ಲ ಅಂತ ಪ್ರಶ್ನೆಗಳ ಮಳೆಸುರಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






