ಐಪಿಎಲ್ ಇತಿಹಾಸದಲ್ಲೇ ಅತೀ ಕೆಟ್ಟ ಪ್ರದರ್ಶನ ನೀಡಿದ ತಂಡ ಯಾವುದು!? RCB ಅಲ್ಲವೇ ಅಲ್ಲ ಗುರು!

ಡಿಸೆಂಬರ್ 7, 2024 - 09:05
 0  11
ಐಪಿಎಲ್ ಇತಿಹಾಸದಲ್ಲೇ ಅತೀ ಕೆಟ್ಟ ಪ್ರದರ್ಶನ ನೀಡಿದ ತಂಡ ಯಾವುದು!? RCB ಅಲ್ಲವೇ ಅಲ್ಲ ಗುರು!

IPL 2025 ರ ಮೆಗಾ ಹರಾಜು ಈಗಾಗಲೇ ಮುಕ್ತಾಯ ಆಗಿದ್ದು, ಎಲ್ಲಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಕೋಟಿ-ಕೋಟಿ ಕೊಟ್ಟು ಖರೀದಿ ಮಾಡಿದೆ. 

IPL ಅಂದ್ರೆ ಇಂದಿನ ಯುವ ಪೀಳಿಗೆಗೆ ಸಿಕ್ಕಾಪಟ್ಟೆ ಕ್ರೇಜ್. ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್ ಕಿಂಗ್ಸ್​ ಹೆಚ್ಚು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿವೆ. ಕೆಲವು ತಂಡಗಳು ಐಪಿಎಲ್ ಇತಿಹಾಸದಲ್ಲೇ ಅತೀ ಕೆಟ್ಟ ದಾಖಲೆಗಳನ್ನು ಬರೆದಿವೆ.

2008 ರಿಂದ ಆರ್​ಸಿಬಿ ಐಪಿಎಲ್ ಆಡ್ತಿದೆ. ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಒಮ್ಮೆ ರನ್ನರ್​ ಅಪ್​​​ ಆಗಿದೆ. 2016ರಲ್ಲಿ ಫೈನಲ್​​ನಲ್ಲಿ ಹೈದರಾಬಾದ್​ ವಿರುದ್ಧ ಆರ್​ಸಿಬಿ ಸೋಲನ್ನು ಕಂಡಿತು. ಆರ್​ಸಿಬಿ ಇಲ್ಲಿವರೆಗೆ ಕಪ್ ಗೆಲ್ಲದಿರಬಹುದು. ಆದರೆ ಪ್ರದರ್ಶನ ಉತ್ತಮವಾಗಿಯೇ ಇದೆ. ಐಪಿಎಲ್ ತಿಹಾಸದಲ್ಲೇ ಅತೀ ವರ್ಸ್ಟ್​​ ತಂಡ ಅಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್.

ಜಿಎಂಆರ್ ಗ್ರೂಪ್ ಮತ್ತು ಜೆಎಸ್​ಡಬ್ಲ್ಯೂ ಸ್ಪೋರ್ಟ್​ ಮಾಲೀಕತ್ವದ ಈ ಫ್ರಾಂಚೈಸಿ ಕೂಡ 2008ರಿಂದ ಐಪಿಎಲ್ ಆಡ್ತಿದೆ. ಡೆಲ್ಲಿ ಕ್ಯಾಪಿಟಲ್ಸ್​ 2020ರಲ್ಲಿ ಫೈನಲ್ ಪ್ರವೇಶ ಮಾಡಿತ್ತು. ಮುಂಬೈ ಇಂಡಿಯನ್ಸ್​ ವಿರುದ್ಧ ಸೋಲನ್ನು ಕಂಡಿತು. ಅಂದ್ಹಾಗೆ ಅತೀ ಕಳಪೆ ಪ್ರದರ್ಶ ನೀಡಿರುವ ತಂಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮೊದಲ ಸ್ಥಾನ. ಇಲ್ಲಿಯವರೆಗೆ ಐಪಿಎಲ್ ಟ್ರೋಫಿಯನ್ನು ಒಮ್ಮೆಯೂ ಗೆದ್ದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಪ್ಲೇಆಫ್​ ಪ್ರವೇಶ ಮಾಡಿಲ್ಲ.

2020ರಲ್ಲಿ ಫೈನಲ್ ಪ್ರವೇಶ ಸೇರಿ ನಾಲ್ಕು ಬಾರಿ ಮಾತ್ರ ಪ್ಲೇ-ಆಫ್ ಪವೇಶ ಮಾಡಿದೆ. ಮೊದಲ ಎರಡು ಸೀಸನ್​​ಗಳಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿತ್ತು. 2009, 2009ರಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಜೊತೆಗೆ 2012 ಹಾಗೂ 2019ರಲ್ಲಿ ಪ್ಲೇ-ಆಫ್​​ ಪ್ರವೇಶ ಮಾಡಿತ್ತು. ಇನ್ನು ಸೋಲೋದ್ರಲ್ಲೂ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಮುಂದಿದೆ. ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್​ ತಂಡವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ

ಇಲ್ಲಿಯವರೆಗೆ 252 ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 134 ಪಂದ್ಯಗಳಲ್ಲಿ ಸೋತು 112ರಲ್ಲಿ ಗೆದ್ದುಕೊಂಡಿದೆ. ವಿನ್ನಿಂಗ್​​ ಪರ್ಸಂಟೇಜ್ 44.44 ಇದೆ. ಪಂಜಾಬ್ ಕಿಂಗ್ಸ್​ 246 ಪಂದ್ಯಗಳಲ್ಲಿ 133 ರಲ್ಲಿ ಸೋತಿದೆ. 109 ಪಂದ್ಯಗಳನ್ನು ಗೆದ್ದುಕೊಂಡಿದ್ದು, ವಿನ್ನಿಂಗ್​ ಪರ್ಸಂಟೇಜ್ 44.3 ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow