ಒಡ ಹುಟ್ಟಿದ ಅಣ್ಣನಿಂದಲೇ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರ! ಸಂಬಂಧಕ್ಕೆ ಬೆಲೆನೇ ಇಲ್ವಾ?!

ಫೆಬ್ರವರಿ 17, 2025 - 22:06
ಫೆಬ್ರವರಿ 17, 2025 - 11:42
 0  25
ಒಡ ಹುಟ್ಟಿದ ಅಣ್ಣನಿಂದಲೇ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರ! ಸಂಬಂಧಕ್ಕೆ ಬೆಲೆನೇ ಇಲ್ವಾ?!

ಅಣ್ಣ- ತಂಗಿ ನಡುವಿನ ಸಂಬಂಧದ ಮೌಲ್ಯವನ್ನೇ ಬುಡಮೇಲು ಮಾಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ಮೇಲೆ ಆಕೆಯ ಸಹೋದರ ಮತ್ತು ಚಿಕ್ಕಪ್ಪ ನಿರಂತರವಾಗಿ ಅತ್ಯಾಚಾರ ಎಸಗಿದಲ್ಲದೆ ಗರ್ಭಪಾತಕ್ಕೆ ಒತ್ತಾಯಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯ ದೂರಿನ ಮೇರೆಗೆ ಮೀರಾ-ಭಾಯಂದರ್, ವಸೈ-ವಿರಾರ್ ಪೊಲೀಸರು ಆಕೆಯ 18 ವರ್ಷದ ಸಹೋದರ ಮತ್ತು ಚಿಕ್ಕಪ್ಪನನ್ನು ಬಂಧಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ತನ್ನ ಸಹೋದರ ಮತ್ತು ಚಿಕ್ಕಪ್ಪ ಹಲವಾರು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ನಾನು ಗರ್ಭಿಣಿಯಾಗಿದ್ದು ನನ್ನ ಚಿಕ್ಕಪ್ಪ ಗರ್ಭಪಾತಕ್ಕಾಗಿ ಮುಂಬೈನ ಗ್ರಾಂಟ್ ರಸ್ತೆಯಲ್ಲಿರುವ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ದಿದ್ದರು ಎಂದು ಸಂತ್ರಸ್ತೆ ದೂರಿದ್ದಾಳೆ.

ಆರೋಪಿಗಳ ವಿರುದ್ಧ ಅತ್ಯಾಚಾರ, ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಒತ್ತಾಯ ಮತ್ತು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow