ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ಸೇವನೆ ಮಾಡಿ ಸಾಕು..!
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್ ಉಪಯೋಗ ಹೆಚ್ಚಾದ ಹಿನ್ನೆಲೆಯಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಎಲೆಕ್ಟ್ರಾನಿಕ್ ಪರಿಕರಗಳ ತೀವ್ರ ಬಳಕೆ ಕಣ್ಣುಗಳಿಗೆ ತೊಂದರೆ ತಂದಿರುವುದು ಸಾಮಾನ್ಯ.
ಈ ಕಾರಣದಿಂದ ಪ್ರತಿದಿನದ ಆಹಾರದಲ್ಲೇ ಕಣ್ಣಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಸೇರಿಸಿಕೊಂಡರೆ, ಹಲವು ಕಣ್ಣಿನ ಸಮಸ್ಯೆಗಳನ್ನು ತಡೆಯಬಹುದು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರು ಶಿಫಾರಸು ಮಾಡುವ ಕೆಲ ಆಹಾರಗಳು ಇಂತಿವೆ:
ಕ್ಯಾರೆಟ್:
ಬೀಟಾ ಕ್ಯಾರೋಟಿನ್ನಿಂದ ಸಮೃದ್ಧವಾಗಿರುವ ಗಜರಿ ಕಣ್ಣುಗಳಿಗೆ ಅಗತ್ಯವಿರುವ ವಿಟಮಿನ್ ಎ ನ್ನು ಒದಗಿಸುತ್ತದೆ. ತೇವಾಂಶ ಕಾಪಾಡಿ ದೃಷ್ಟಿಶಕ್ತಿಯನ್ನು ಸುಧಾರಿಸುತ್ತದೆ.
ಪಾಲಕ್:
ವಿಟಮಿನ್ ಎ ಮತ್ತು ಸಿ ಜೊತೆಗೆ ಲುಟೀನ್ ಇರುವ ಈ ಎಲೆ ಸೊಪ್ಪು ಕಣ್ಣುಗಳ ಉರಿಯನ್ನು ತಡೆಯಲು ಸಹಕಾರಿ.
ಟೊಮೆಟೊ:
ಲೈಕೋಪೀನ್ ಎನ್ನುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕದಿಂದ ಸಮೃದ್ಧವಾಗಿದೆ. ಇದು ಕಣ್ಣುಗಳ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.
ಸಿಹಿ ಆಲೂಗಡ್ಡೆ:
ವಿಟಮಿನ್ ಎ ಯುಳ್ಳ ಈ ಆಲೂಗಡ್ಡೆ, ರಾತ್ರಿ ಕಂಡುಬರುವ ದೃಷ್ಟಿದೋಷ ನಿವಾರಣೆಗೆ ಸಹಕಾರಿಯಾಗಿದೆ.
ಬೆಟ್ಟದ ನೆಲ್ಲಿಕಾಯಿ:
ವಿಟಮಿನ್ ಸಿ ಹಾಗೂ ಇತರ ಎಂಟಿ-ಆಕ್ಸಿಡೆಂಟ್ಗಳ ಶ್ರೇಷ್ಠ ಮೂಲವಿರುವ ಈ ಹಣ್ಣು, ಕಣ್ಣಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಪಪ್ಪಾಯಿ:
ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಬೆಳಕಿಗೆ ಸಂವೇದನಾಶೀಲತೆಯಿಂದ ಉಂಟಾಗುವ ತೊಂದರೆ ಕಡಿಮೆ ಮಾಡುತ್ತದೆ.
ವಾಲ್ನಟ್ಸ್ :
ಒಮೆಗಾ-3 ಕೊಬ್ಬಿನಾಮ್ಲಗಳು ಇರುವುದರಿಂದ ಕಣ್ಣುಗಳಿಗೆ ತೇವಾಂಶ ಒದಗಿಸಿ ಮ್ಯಾಕ್ಯುಲರ್ ಡಿಜೆನರೇಶನ್ ತಡೆಯಲು ಸಹಾಯ ಮಾಡುತ್ತದೆ.
ಕಿತ್ತಳೆ:
ವಿಟಮಿನ್ ಸಿ ನಿಂದ ಸಮೃದ್ಧವಾಗಿರುವ ಈ ಹಣ್ಣು ಕಣ್ಣಿನ ಉರಿಯೂತ ಕಡಿಮೆ ಮಾಡುವಲ್ಲಿ ಸಹಕಾರಿ.
ನಿಮ್ಮ ಪ್ರತಿಕ್ರಿಯೆ ಏನು?