ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳು ಸೇರಿ ಬೆಂಗಳೂರಿನ 5 ಕಡೆ ಇಡಿ ದಾಳಿ!

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ವಿದೇಶಿ ಆರ್ಥಿಕ ವ್ಯವಹಾರ ಪ್ರಕರಣದಲ್ಲಿ ಇಂದು ಬೆಂಗಳೂರು ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ವಿದೇಶದಲ್ಲಿ ಹಣ ಹೂಡಿಕೆ, ಆಸ್ತಿ ಖರೀದಿ, ಬ್ಯಾಂಕ್ ಖಾತೆಗಳು, ಐಷಾರಾಮಿ ವಾಹನಗಳ ಖರೀದಿಯ ಬಗ್ಗೆ ದಾಖಲೆ ಪರಿಶೀಲನೆಗಾಗಿ ದೆಹಲಿಯಿಂದ ಬಂದ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬ್ಬಾರೆಡ್ಡಿಯವರಿಗೆ ಮಲೇಶಿಯಾ, ಹಾಂಕಾಂಗ್, ಜರ್ಮನಿಯಲ್ಲಿ ಆಸ್ತಿಗಳಿವೆ. ವಿದೇಶದಲ್ಲಿ ಬ್ಯಾಂಕ್ ಖಾತೆಗಳು, ವ್ಯಾಪಾರ ಸಂಬಂಧಿತ ಹೂಡಿಕೆಗಳು ಕೂಡ ಇದ್ದು, ಅವುಗಳ ಕುರಿತಾಗಿ ಶೋಧ ನಡೆಯುತ್ತಿದೆ.
ಕುಟುಂಬದ ಹೆಸರಲ್ಲಿ ಐಷಾರಾಮಿ ಮನೆಗಳು, ಕಾರುಗಳು ಖರೀದಿಸಿರುವ ಮಾಹಿತಿಯೂ ಇದೆ ಸುಬ್ಬಾರೆಡ್ಡಿ ಅವರು ಮೂರು ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿದ್ದಾರೆ. ಇಡೀ ದೇಶದಾದ್ಯಂತ 37 ಕಡೆಗಳಲ್ಲಿ ಇಡಿ ದಾಳಿ ನಡೆದಿದ್ದು, ಅದರ ಭಾಗವಾಗಿ ಬೆಂಗಳೂರು ನಗರದಲ್ಲಿಯೇ 5 ಕಡೆ ದಾಳಿ ನಡೆದಿದೆ
ನಿಮ್ಮ ಪ್ರತಿಕ್ರಿಯೆ ಏನು?






