ಕಾನೂನು ಸುವ್ಯವಸ್ಥೆ ಮರೆಯಾಯ್ತಾ!? ಸರ್ಕಾರಿ ವಾಹನದಲ್ಲೇ ಗನ್ ಹಿಡಿದು ಪೋಸ್ ಕೊಟ್ಟ ಯುವಕ!

ಎಪ್ರಿಲ್ 6, 2025 - 13:59
 0  8
ಕಾನೂನು ಸುವ್ಯವಸ್ಥೆ ಮರೆಯಾಯ್ತಾ!? ಸರ್ಕಾರಿ ವಾಹನದಲ್ಲೇ ಗನ್ ಹಿಡಿದು ಪೋಸ್ ಕೊಟ್ಟ ಯುವಕ!

ಮೈಸೂರು:- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾನೂನಿಗೆ ಭಯವಿಲ್ಲದಂತೆ ಯುವ ಸಮೂಹ ವರ್ತನೆ ಮಾಡುತ್ತಿದ್ದಾರೆ. ರೀಲ್ಸ್ ಮಾಡಿ ಬರುವ ಲೈಕ್ ಹಾಗೂ ಕಾಮೆಂಟ್ ಗೋಸ್ಕರ ಕಾನೂನು ನಿಯಮಗಳನ್ನೇ ಉಲ್ಲಂಘನೆ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. 

ಅದರಂತೆ ಇಲ್ಲೋರ್ವ ಯುವಕನೊಬ್ಬ ಸರ್ಕಾರಿ ವಾಹನದಲ್ಲಿ ಗನ್‌ ಹಿಡಿದು ಪೋಸ್ ಕೊಟ್ಟಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗಿದೆ. 

ಮೈಸೂರಿನ ಟಿ.ಕೆ.ಬಡಾವಣೆಯ ಯುವಕನೊಬ್ಬ ಗನ್‌ ಹಿಡಿದು ವೀಡಿಯೋ ಮಾಡಿದ್ದಾನೆ. ಜ್ಯುವೆಲರಿ ಶಾಪ್‌ವೊಂದರ ಮಾಲೀಕನ ಮಗ ಈತ ಎಂದು ತಿಳಿದುಬಂದಿದೆ. ಸರ್ಕಾರಿ ವಾಹನದಲ್ಲಿ ಕುಳಿತು ವಿಡಿಯೋ ಮಾಡಿ ಬಳಿಕ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರಸ್ವತಿಪುರಂ ಹಾಗೂ ಕೃಷ್ಣರಾಜ ಸಂಚಾರ ಪೊಲೀಸರಿಂದ ಆರೋಪಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ಇದು ಹಳೆಯ ವಿಡಿಯೋ ಅಂತಾ ಯುವಕ ಮಾಹಿತಿ ನೀಡಿದ್ದಾರೆ.

ತಾನು ಹಿಡಿದಿರುವುದು ಅಸಲಿ ಗನ್ ಅಲ್ಲ, ಅದು ಪಟಾಕಿ ಗನ್. ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ವಿಡಿಯೋ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸರ್ಕಾರಿ ವಾಹನ ಯಾವುದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow