ಕಾಶ್ಮೀರದಲ್ಲಿ ಪ್ರಚಾರದ ಅಖಾಡಕ್ಕೆ ಧುಮಕಲಿದ್ದಾರೆ ರಾಹುಲ್‌ ಗಾಂಧಿ, ಬುಧವಾರ 2 ಜಿಲ್ಲೆಗಳಲ್ಲಿ ಪ್ರಚಾರ

ಸೆಪ್ಟೆಂಬರ್ 4, 2024 - 13:12
 0  18
ಕಾಶ್ಮೀರದಲ್ಲಿ ಪ್ರಚಾರದ ಅಖಾಡಕ್ಕೆ ಧುಮಕಲಿದ್ದಾರೆ ರಾಹುಲ್‌ ಗಾಂಧಿ, ಬುಧವಾರ 2 ಜಿಲ್ಲೆಗಳಲ್ಲಿ ಪ್ರಚಾರ
FOCUS KARNATAKA Rahul Gandhi

ಕಾಶ್ಮೀರದಲ್ಲಿ ಪ್ರಚಾರದ ಅಖಾಡಕ್ಕೆ ಧುಮಕಲಿದ್ದಾರೆ ರಾಹುಲ್‌ ಗಾಂಧಿ, ಬುಧವಾರ 2 ಜಿಲ್ಲೆಗಳಲ್ಲಿ ಪ್ರಚಾರ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್‌ ಪಕ್ಷದ ಅಧಿಕೃತ ಪ್ರಚಾರಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಚಾಲನೆ ನೀಡಲಿದ್ದಾರೆ.

ಕಾಶ್ಮೀರ ಕಣಿವೆಯ ಪ್ರಚಾರ ಅಖಾಡಕ್ಕೆ ಬುಧವಾರದಿಂದ ಇಳಿಯಲಿರುವ ರಾಹುಲ್‌ ಅವರು ರಾಂಬನ್‌, ಅನಂತ್‌ನಾಗ್‌ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಒಂದು ದಶಕದ ಬಳಿಕ ಕಣಿವೆಯಲ್ಲಿ ನಡೆಯುತ್ತಿರುವ ಜನಮತ ಹಬ್ಬದ ಮೊದಲ ಹಂತದ ಚುನಾವಣೆ ಸೆಪ್ಟೆಂಬರ್ 18 ರಂದು ನಡೆಯಲಿದೆ. ಕಾಂಗ್ರೆಸ್‌ (32), ಎನ್‌ಸಿ (51) ಮೈತ್ರಿ ಮಾಡಿಕೊಂಡಿದ್ದು, ಐದು ಕ್ಷೇತ್ರಗಳಲ್ಲಿ ಪರಸ್ಪರ ಎದುರಾಳಿಯಾಗಿವೆ. ಮುಂಬರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆ ಹಾಗೂ ಪಕ್ಷ ಸಂಘಟನೆಗೆ ಒತ್ತು ಕೊಡಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಎಐಸಿಸಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳ ಜತೆ ಮಂಗಳವಾರ ಸಭೆ ನಡೆಸಿದರು.

ವಿಡಿಯೋ ನೋಡಲು ಕೆಳಗಿನ ಪೋಟೋ ಮೇಲೆ ಕ್ಲಿಕ್ ಮಾಡಿ.

ದಿಲ್ಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸಂಘಟನೆ, ವಿವಿಧ ರಾಜ್ಯಗಳಲ್ಲಿ ಎದುರಾಗಿರುವ ಚುನಾವಣೆ ಸಿದ್ಧತೆ, ಭವಿಷ್ಯದಲ್ಲಿ ಪಕ್ಷ ಸಾಗಬೇಕಾದ ಹಾದಿ, ತಳಮಟ್ಟದಿಂದ ಪಕ್ಷ ಬಲಪಡಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಇತ್ತೀಚೆಗೆ ನೇಮಕಗೊಂಡಿದ್ದ ವಿವಿಧ ಹಂತದ ಪದಾಧಿಕಾರಿಗಳು, ರಾಜ್ಯ ಉಸ್ತುವಾರಿಗಳ ಜತೆ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು, ''ಪಕ್ಷ ಸಂಘಟನೆಗೆ ಒತ್ತು ಕೊಡಿ. ಜನರ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಿ,'' ಎಂದು ಸಲಹೆ ನೀಡಿದರು.

ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತಂತೆ ಜೆಎಂಎಂ ಮುಖಂಡ ಹಾಗೂ ಜಾರ್ಖಂಡ್‌ ಸಿಎಂ ಹೇಮಂತ್‌ ಸೋರೆನ್ ಅವರು ದಿಲ್ಲಿಯಲ್ಲಿ ರಾಹುಲ್‌ ಹಾಗೂ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸ್ಥಾನ ಹಂಚಿಕೆ, ಪ್ರಚಾರ ತಂತ್ರ, ಅನುಸರಿಬೇಕಾದ ರಾಜಕೀಯ ರಣತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow