ಗುಡ್ ನ್ಯೂಸ್: 'ಭಾರತೀಯ ವಾಯುಪಡೆ'ಯಲ್ಲಿ 'ಅಗ್ನಿವೀರ್' ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ

ಜುಲೈ 15, 2025 - 08:20
 0  7
ಗುಡ್ ನ್ಯೂಸ್: 'ಭಾರತೀಯ ವಾಯುಪಡೆ'ಯಲ್ಲಿ 'ಅಗ್ನಿವೀರ್' ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ agnipathvayu.cdac.in ಮೂಲಕ ಜುಲೈ 11ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದ್ದು, ಆಯ್ಕೆ ಪರೀಕ್ಷೆ ಸೆಪ್ಟೆಂಬರ್ 25 ರಂದು ಆರಂಭವಾಗಲಿದೆ.

ಅರ್ಹತಾ ಮಾನದಂಡಗಳು:

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಇಂಟರ್ಮೀಡಿಯೇಟ್ (10+2) ಅಥವಾ ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‌ ನಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು.

ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನದಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರುವವರಾಗಿರಬೇಕು.

ಅಥವಾ ಇತರ ಪ್ರೊಫೆಷನಲ್ ಕೋರ್ಸುಗಳು ಹಾಗೂ ಯಾವುದೇ ವಿಷಯದ 10+2 ಪಾಸಾಗಿರಬಹುದು, ಆದರೆ ಭೌತಶಾಸ್ತ್ರ ಮತ್ತು ಗಣಿತ ಇರುವವರು ಮೇಲುಗೈ.


ವಯೋಮಿತಿ:

02 ಜುಲೈ 2005 ರಿಂದ 02 ಜನವರಿ 2009 ರೊಳಗಿನ ಜನ್ಮ ದಿನಾಂಕ ಹೊಂದಿರಬೇಕು.

ಕನಿಷ್ಠ ವಯಸ್ಸು 17.5 ವರ್ಷಗಳು, ಗರಿಷ್ಠ 21 ವರ್ಷಗಳು.


ಅರ್ಜಿಶುಲ್ಕ:

550 ರೂ. (ಆನ್‌ಲೈನ್ ಮೂಲಕ ಪಾವತಿ).


ಆಯ್ಕೆ ಪ್ರಕ್ರಿಯೆ:

1. ಆನ್‌ಲೈನ್ ಲಿಖಿತ ಪರೀಕ್ಷೆ:

10+2 CBSE ಪಠ್ಯಕ್ರಮದ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ನ 60 ನಿಮಿಷಗಳ ಪರೀಕ್ಷೆ.

ಇತರೆ ವಿಷಯಗಳಿಗೆ 45 ನಿಮಿಷಗಳ ಪರೀಕ್ಷೆ.

2. ದೈಹಿಕ ಪರೀಕ್ಷೆ:

ಪುರುಷರಿಗೆ: 1.6 ಕಿ.ಮೀ ಓಟ 7 ನಿಮಿಷಗಳಲ್ಲಿ.

ಮಹಿಳೆಗಳಿಗೆ: 1.6 ಕಿ.ಮೀ ಓಟ 8 ನಿಮಿಷಗಳಲ್ಲಿ.

ಪುಷ್ ಅಪ್, ಸಿಟ್ ಅಪ್ ಮತ್ತು ಸ್ಕ್ವಾಟ್ ಪರೀಕ್ಷೆಗಳು.

3. ವೈದ್ಯಕೀಯ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆ.

ಈ ನೇಮಕಾತಿಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಹೆಚ್ಚಿನ ವಿವರಗಳನ್ನು ಪಡೆದು, ಅರ್ಜಿಯನ್ನು ಸಮಯಕ್ಕೆ ಸಲ್ಲಿಸುವುದು ಮಹತ್ವದಿದ್ದು, ಇದು ಭಾರತೀಯ ವಾಯುಪಡೆಗೆ ಸೇರುವ ಉತ್ತಮ ಅವಕಾಶವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow