ಚಿಕಿತ್ಸೆಗೆ ಅಮೇರಿಕಾಗೆ ತೆರಳಿದ ಹ್ಯಾಟ್ರಿಕ್ ಹೀರೋ: ಇದಕ್ಕೂ ಮುನ್ನ ಶಿವಣ್ಣನ ಅಪ್ಪಿ ವಿನೋದ್ ರಾಜ್ ಭಾವುಕ!

ಶಿವಣ್ಣ ಅನಾರೋಗ್ಯದಿಂದ ಬಳಲುತ್ತಿರೋ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು, ಸುಮಾರು ತಿಂಗಳಿಂದ ನೋವು ಅನುಭವಿಸ್ತಿದ್ರು.. ಶಿವಣ್ಣ ಯಾರೊಟ್ಟಿಗೂ ನೋವು ಹೇಳಿಕೊಂಡಿರಲಿಲ್ಲ, ದಿನ ಕಳೆದಂತೇ ಶಿವಣ್ಣನೇ ಈ ವಿಚಾರವನ್ನು ಬಹಿರಂಗ ಪಡಿಸಿದ್ರು. ಅಲ್ಲಿಂದ ಇಲ್ಲಿ ತನಕ ಶಿವಣ್ಣನ ಕೋಟ್ಯಾಂತರ ಅಭಿಮಾನಿಗಳು, ನೋವು ಅನುಭವಿಸಿದ್ರು. ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಶಿವಣ್ಣ, ಕಣ್ಣೀರು ಹಾಕೋದನ್ನು ನೋಡಿ, ತಾವೂ ಕಣ್ಣೀರು ಹಾಕಿದ್ರು.
ಅಂದ್ಹಾಗೆ, ಹೆಚ್ಚಿನ ಚಿಕಿತ್ಸೆಗಾಗಿ ಶಿವಣ್ಣ ಅಮೆರಿಕಾಗೆ ತೆರಳುತ್ತಿದ್ದು, ಇಂದು ರಾತ್ರಿಯೇ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ಶಿವಣ್ಣ ಅಮೆರಿಕಾಗೆ ಹೊರಡೋ ವಿಚಾರ ಗೊತ್ತಾಗ್ತಿದ್ದಂತೆ ರಾಜ್ಯರ ನಾನಾ ಭಾಗಗಳಿಂದ ಅಭಿಮಾನಿಗಳು ಶಿವಣ್ಣನ ಮನೆ ಮುಂದೆ ಜಮಾಯಿಸಿದ್ರು. ಶಿವಣ್ಣಗೆ ಧೈರ್ಯ ಹೇಳಿ, ಹುಷಾರಾಗಿ ಬರ್ತೀರಣ್ಣಾ ಹೋಗಿ ಬನ್ನಿ.. ಅನ್ನೋ ಹಾರೈಕೆಯ ಮಾತುಗಳನ್ನಾಡಿದ್ರು.. ಅಭಿಮಾನಿಗಳ ಈ ಪ್ರೀತಿ, ಕಾಳಜಿ ನೋಡಿ ಶಿವಣ್ಣನೂ ಮೌನವಾಗಿದ್ರು. ಅಮೆರಿಕಾಗೆ ಹೊರಡೋ ವಿಚಾರ ತಿಳಿದು ನಟ ವಿನೋದ್ ರಾಜ್ ಶಿವಣ್ಣ ಅವರ ನಿವಾಸಕ್ಕೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸಿದ್ದಾರೆ. ಇದಾದ ಬಳಿಕ ಶಿವಣ್ಣ ಅವರ ಜೊತೆಗೆ ವಿನೋದ್ ರಾಜ್ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಡಿಸೆಂಬರ್ 24 ರಂದು ಅಮೆರಿಕಾದ ಮಿಯಾಮ್ನಲ್ಲಿ ಶಿವಣ್ಣಗೆ ಚಿಕಿತ್ಸೆ ನಡೆಯಲಿದ್ದು, ಶಿವಣ್ಣನ ಜೊತೆಗೆ ಗೀತಕ್ಕ ಮತ್ತು ಪುತ್ರಿ ನಿವೇದಿತಾ ಕೂಡ ಅಮೆರಿಕಾಗೆ ಹೊರಟಿದ್ದಾರೆ. ಬಳಿಕ ಒದ್ದೆಯಾದ ಕಣ್ಣುಗಳಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ, ಕೆಲಹೊತ್ತು ಭಾವುಕರಾಗಿದ್ರು.
ನಿಮ್ಮ ಪ್ರತಿಕ್ರಿಯೆ ಏನು?






