ಚೆನ್ನೈ ತಂಡದಲ್ಲಿ ಹೆಚ್ಚಾಯ್ತು ಆಂತರಿಕ ಬಿಕ್ಕಟ್ಟು: ಆಟಗಾರರ ಸ್ಥಿತಿ ನೋಡಿ ಫ್ಯಾನ್ಸ್ ಬೇಸರ!

2025ರ IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಟೀಮ್ ಚೆನ್ನೈ ಸೂಪರ್ ಕಿಂಗ್ಸ್ನ ಆಟ ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಇಡೀ ತಂಡ ಕಂಗೆಟ್ಟಿದೆ. ಅಭಿಮಾನಿಗಳನ್ನ ನೋವು, ಬೇಸರ, ಹತಾಶೆ ಆವರಿಸಿದೆ.
ಸೀಸನ್-18ರ ಐಪಿಎಲ್ ಭರದಿಂದ ಸಾಗಿದೆ. ರೋಚಕ ಪಂದ್ಯಗಳ ಹಣಾಹಣಿ ಸಖತ್ ಕಿಕ್ ನೀಡ್ತಿದೆ. ಆದ್ರೆ, ಫೈವ್ ಟೈಮ್ಸ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ದುಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಚೆನ್ನೈ, ಗೆಲುವಿನ ಹುಡುಕಾಟದಲ್ಲಿದೆ. ಸತತ ಸೋಲಿನ ನೋವು ಅಭಿಮಾನಿಗಳನ್ನ ಕಾಡ್ತಿದೆ. ಇದ್ರ ನಡುವೆ ಮತ್ತೊಂದು ಬೇಸರದ ಸುದ್ದಿ ಚೆನ್ನೈ ಕ್ಯಾಂಪ್ನಿಂದ ಹೊರಬಿದ್ದಿದೆ
ಸೀಸನ್ ಮಧ್ಯೆದಲ್ಲಿ ನಾಯಕತ್ವದ ಬದಲಾವಣೆಯಾದ ಬೆನ್ನಲ್ಲೇ ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಋತುರಾಜ್ ಗಾಯಕ್ವಾಡ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಧೋನಿ ಸೀಸನ್ನ ಉಳಿದ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸ್ತಾರೆ ಅನ್ನೋ ಅಧಿಕೃತ ಪ್ರಕಟಣೆಯನ್ನ ಸಿಎಸ್ಕೆ ಫ್ರಾಂಚೈಸಿ ಹೊರಡಿಸಿದೆ. ಹಾಗಿದ್ರೂ, ಚೆನ್ನೈ ತಂಡದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಇಂಜುರಿ ಕಾರಣಕ್ಕೆ ಋತುರಾಜ್ ಗಾಯಕ್ವಾಡ್, ಟೂರ್ನಿಯಿಂದ ಔಟ್ ಆಗಿದ್ರೂ ಋತುರಾಜ್ ತಂಡದಲ್ಲೇ ಉಳಿದಿದ್ದಾರೆ. ತಂಡದೊಂದಿಗೆ ಟ್ರಾವೆಲ್ ಮಾಡ್ತಿರೋ ಋತುರಾಜ್ ಗಾಯಕ್ವಾಡ್ ಮೈದಾನಕ್ಕೂ ಬರ್ತಿದ್ದಾರೆ. ಆದ್ರೆ, ಧೋನಿ ಜೊತೆಗಿನ ಸಂಬಂಧ ಮೊದಲಿನಂತಿಲ್ಲ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್ ರೂಮ್ ಗುಸುಗುಸು ಆದ್ರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ ಧೋನಿಯನ್ನ ಋತುರಾಜ್ ಅನ್ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ
ಇನ್ಸ್ಸ್ಟಾಗ್ರಾಂನಲ್ಲಿ ಋತುರಾತ್ ಧೋನಿ ಅಕೌಂಟ್ನ ಫಾಲೋ ಮಾಡ್ತಿಲ್ಲ. ಸದ್ಯ ಧೋನಿಯನ್ನ ಋತುರಾಜ್ ಅನ್ಫಾಲೋ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಇದು ಶೀತಲಸಮರದ ಗಾಸಿಪ್ಗೆ ಕಿಡಿ ಹಚ್ಚಿದೆ. ಆದ್ರೆ, ಕೆಲ ಫ್ಯಾನ್ಸ್ ಮಾತ್ರ ಇನ್ಸ್ಟಾದಲ್ಲಿ ಈ ಹಿಂದೆಯೂ ಋತುರಾಜ್ ಗಾಯಕ್ವಾಡ್, ಧೋನಿನ ಫಾಲೋ ಮಾಡ್ತಿರಲಿಲ್ಲ ಎಂಬ ವಾದ ಮಾಡ್ತಿದ್ದಾರೆ. ಈ ವಾದ-ಪ್ರತಿವಾದದ ಹೊರತಾಗಿಯೂ ಚೆನ್ನೈ ಕ್ಯಾಂಪ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೀತಿದೆ.
ನಿಮ್ಮ ಪ್ರತಿಕ್ರಿಯೆ ಏನು?






