ಜಸ್ಟ್ SSLC ಪಾಲಾದ್ರೆ ಸಾಕು ಸಿಗುತ್ತೆ ಗೌರ್ಮಂಟ್ JOB: ಅಂಚೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ!

ಜನವರಿ 13, 2025 - 08:00
 0  9
ಜಸ್ಟ್ SSLC ಪಾಲಾದ್ರೆ ಸಾಕು ಸಿಗುತ್ತೆ ಗೌರ್ಮಂಟ್ JOB: ಅಂಚೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ!

SSLC ಪಾಸಾಗಿ ಮನೆಯಲ್ಲೇ ಇದ್ದೀರಾ!? ಹಾಗಿದ್ರೆ ಅಂಚೆ ಇಲಾಖೆಯಲ್ಲಿ ನಿಮಗೆ ಸಿಗಲಿದೆ ಗೌರ್ಮಂಟ್ ಕೆಲಸ. ಹೀಗಾಗಿ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಂಚೆ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಪಡೆಯಬೇಕು ಎಂಬ ಆಸೆ ಇರುವ ಉದ್ಯೋಗಾಕಾಂಕ್ಷಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ. ಬರೋಬ್ಬರಿ 18200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಕೆಗೆ ಅರ್ಹರು ಎಂದು ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಕೆಗೂ ಮೊದಲು ಅಭ್ಯರ್ಥಿಗಳ ವಯೋಮಿತಿ, ಮಾಸಿಕ ವೇತನ, ಆರ್ಜಿ ಸಲ್ಲಿಕೆ ಕೊನೆಯ ದಿನಾಂಕ, ವಿದ್ಯಾರ್ಹತೆ, ನೇಮಕಾತಿಯ ಪ್ರಮುಖ ಮಾಹಿತಿ ಇಲ್ಲಿದೆ.

ನೇಮಕಾತಿಯ ಸಂಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ

ಹುದ್ದೆ ಹೆಸರು: ಬಹುಕಾರ್ಯ ಸಿಬ್ಬಂದಿ (MTS)

ಒಟ್ಟು ಹುದ್ದೆಗಳು: 18,200 ಹುದ್ದೆಗಳು

ಪೋಸ್ಟಿಂಗ್: ಭಾರತ

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಜನವರಿ 28

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಶೈಕ್ಷಣಿಕ ಅರ್ಹತೆ
ಈ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಸ್ಥಳೀಯ ಭಾಷೆ ಗೊತ್ತಿರುವ ಜೊತೆಗೆ ಕನಿಷ್ಠ ಕಂಪ್ಯೂಟರ್ ಜ್ಞಾನ ಇರಬೇಕು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
* ಅಭ್ಯರ್ಥಿಗಳ SSLC ಅಂಕಪಟ್ಟಿ, ಪ್ರವೇಶ ಪತ್ರ

* ಪಾಸಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ

* ಆಧಾರ್ ಗುರುತಿನ ಚೀಟಿ

* ಜಾತಿ ಪ್ರಮಾಣ ಪತ್ರ

* ಜನ್ಮ ಪ್ರಮಾಣ ಪತ್ರ

ವಯಸ್ಸಿನ ಮಿತಿ
ನೇಮಕಾತಿ ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳಾಗಿರಬೇಕು. ಜಾತಿ ಆಧಾರದಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಸಿಗಬಹುದು.

ಅರ್ಜಿ ಸಲ್ಲಿಕೆ ಹೇಗೆ, ವಿಧಾನ ತಿಳಿಯಿರಿ
ಅಭ್ಯರ್ಥಿಗಳು ಜನವರಿ 28ರೊಳಗೆ ಅಂಚೆ ಇಲಾಖೆ ಅಧಿಕೃತ ಜಾಲತಾಣ https://www.indiapost.gov.in/ ಗೆ ಭೇಟಿ ನೀಡಬೇಕು. ಇಲ್ಲಿ ನೋಂದಾಯಿಸಿಕೊಂಡು ಅಗತ್ಯ ದಾಖಲೆಗಳ ಸಮೇತವಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿಕೊಳ್ಳಬೇಕು..

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow