ಟೀಂ ಇಂಡಿಯಾ ದಿಗ್ಗಜ ಹರ್ಭಜನ್ ಸಿಂಗ್ ಪತ್ನಿ ಯಾರು..? ಈಕೆ ಬಾಲಿವುಡ್’ನ ಖ್ಯಾತ ನಟಿ..! ಇವರ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು..?

ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಎಷ್ಟು ಪ್ರತಿಭಾನ್ವಿತರೋ ಅಷ್ಟೇ ವಿವಾದಗಳಿಗೂ ತುತ್ತಾಗಿದ್ದರು. ಹರ್ಭಜನ್ ಕೇವಲ 18 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ದೀರ್ಘಕಾಲದವರೆಗೆ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ತಮ್ಮ ಅದ್ಭುತ ಪ್ರದರ್ಶನದಿಂದ, 'ಭಜ್ಜಿ' ಭಾರತೀಯ ತಂಡಗಳಿಗೆ ಅನೇಕ ಸ್ಮರಣೀಯ ವಿಜಯಗಳನ್ನು ನೀಡಿದರು.
ಇನ್ನೂ 8 ವರ್ಷಗಳ ಕಾಲ ಡೇಟಿಂಗ್ ನಂತರ ಅಕ್ಟೋಬರ್ 2015 ರಲ್ಲಿ ನಟಿ ಗೀತಾ ಬಸ್ರಾ ಅವರನ್ನು ವಿವಾಹವಾದರು. ಇಬ್ಬರಿಗೂ ಮಗಳು ಹಿನಾಯಾ ಹೀರ್ ಮತ್ತು ಮಗ ಜೋವನ್ ವೀರ್ ಸಿಂಗ್ ಇದ್ದಾರೆ. ಹರ್ಭಜನ್ ಅವರ ಲವ್ ಸ್ಟೋರಿ ಬಗ್ಗೆ ಹೇಳುವುದಾದರೆ, ಇದು 'ಲವ್ ಅಟ್ ಫಸ್ಟ್ ಸೈಟ್' ಇದ್ದಂತೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಖ್ಯಾತ ಬ್ಯಾಟ್ಸ್ ಮನ್ ಗಳ ವಿಕೆಟ್ ಕಬಳಿಸುತ್ತಿದ್ದ ಭಜ್ಜಿ, ಗೀತಾರನ್ನು ಮೊದಲ ಬಾರಿಗೆ 'ದಿ ಟ್ರೈನ್' ಚಿತ್ರದ 'ವೋಹ್ ಅಜ್ಞಾತಬೀ' ಹಾಡಿನಲ್ಲಿ ನೋಡಿ ಮನಸೋತಿದ್ದರಂತೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಹರ್ಭಜನ್, 'ನಾನು ಈ ಹಾಡನ್ನು ನೋಡಿದಾಗ ಲಂಡನ್‌ನಲ್ಲಿದ್ದೆ. ಹಾಡು ನೋಡಿದ ನಂತರ ಆ ನಟಿ (ಗೀತಾ) ಬಗ್ಗೆ ಯುವರಾಜ್ ಸಿಂಗ್ ಬಳಿ ಕೇಳಿದೆ. ಜೊತೆಗೆ ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದೆ. ನಂತರ ಬಾಲಿವುಡ್ ಚಿತ್ರರಂಗದಲ್ಲಿ ನನ್ನ ಸಂಪರ್ಕಗಳ ಮೂಲಕ ಗೀತಾ ಅವರ ನಂಬರ್ ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಇದರ ನಂತರ ಗೀತಾ ಅವರಿಗೆ ಮೆಸೇಜ್ ಮಾಡಿ ಕಾಫಿ ಡೇಟ್ ಕರೆದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ” ಎಂದು ಭಜ್ಜಿ ಹೇಳಿದ್ದಾರೆ.
ದಾದ ಬಳಿಕ, ಗೀತಾ ಹರ್ಭಜನ್’ಗೆ ಕರೆ ಮಾಡಿ ಟೀಮ್ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗಿದ್ದಕ್ಕೆ ಅಭಿನಂದಿಸಿದ್ದರು. ಇದಾದ ಬಳಿಕವೇ ಅವರ ಪ್ರೇಮಕಥೆ ಮತ್ತೆ ಚಿಗುರೊಡೆಯಿತು. ಇದಾದ ಬಳಿಕ ಹರ್ಭಜನ್ ಐಪಿಎಲ್ ಪಂದ್ಯ ವೀಕ್ಷಿಸಲು ಗೀತಾಗೆ ಆಹ್ವಾನ ನೀಡಿದರೂ ಆಕೆ ಬಂದಿರಲಿಲ್ಲ. ಇದರಂದ ಭಜ್ಜಿ ತುಂಬಾ ಬೇಸರಗೊಂಡಿದ್ದರು. ಆದರೆ, ನಂತರ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಯಿತು.
ಅಂದಹಾಗೆ ಭಜ್ಜಿ, ಗೀತಾಗೆ ಪ್ರಪೋಸ್ ಮಾಡಿದಾಗ ಅವರು ತಮ್ಮ ವೃತ್ತಿಜೀವನವನ್ನು ಉಲ್ಲೇಖಿಸಿ ನಿರಾಕರಿಸಿದ್ದರಂತೆ. ಆದರೆ, ಈ ನಿರಾಕರಣೆಯ ಹೊರತಾಗಿಯೂ, ಇಬ್ಬರ ನಡುವೆ ನಿಕಟತೆ ಉಳಿದುಕೊಂಡಿತು. ಹೀಗಾಗಿ 8 ವರ್ಷಗಳ ಕಾಲ ಡೇಟಿಂಗ್ ಮಾಡಿದ ಅವರು 2015 ರಲ್ಲಿ ವಿವಾಹವಾದರು. ಭಾರತೀಯ ಮೂಲದ ಗೀತಾ ಬ್ರಿಟನ್’ನ ಪೋರ್ಟ್ಸ್‌ಮೌತ್‌ನಲ್ಲಿ ಜನಿಸಿದರು. ಡಿಸೆಂಬರ್ 2022 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತರಾದ ಹರ್ಭಜನ್, ಭಾರತಕ್ಕಾಗಿ 103 ಟೆಸ್ಟ್, 236 ODI ಮತ್ತು 28 T20I ಗಳನ್ನು ಆಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






