ತುಳಸಿ ಪೂಜೆ ಮಾಡುವಾಗ ಇರಲಿ ಎಚ್ಚರ! ಈ ತಪ್ಪು ಮಾಡಿದರೆ ಬಡತನ ಕಾಡಬಹುದು

ಅಕ್ಟೋಬರ್ 24, 2025 - 07:01
 0  12
ತುಳಸಿ ಪೂಜೆ ಮಾಡುವಾಗ ಇರಲಿ ಎಚ್ಚರ! ಈ ತಪ್ಪು ಮಾಡಿದರೆ ಬಡತನ ಕಾಡಬಹುದು

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವು ಅತ್ಯಂತ ಪವಿತ್ರವಾದದ್ದು. ಪ್ರತಿ ಹಿಂದೂ ಮನೆಯ ಅಂಗಳದಲ್ಲಿ ತುಳಸಿ ಗಿಡ ಇರುವುದು ಸಾಮಾನ್ಯ. ಮನೆಯಲ್ಲಿ ತುಳಸಿ ಗಿಡ ಇರುವುದು ಲಕ್ಷ್ಮೀ ದೇವಿಯ ವಾಸಸ್ಥಾನ ಎಂದು ನಂಬಲಾಗುತ್ತದೆ. ವಿಷ್ಣು ದೇವರ ಪ್ರಿಯವಾದ ಸಸ್ಯವಾದ ತುಳಸಿಯನ್ನು ವಿಷ್ಣು ಪ್ರಿಯಾ ಎಂದೂ ಕರೆಯಲಾಗುತ್ತದೆ.

ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ತುಳಸಿ ಗಿಡ ನೆಡುವುದರಿಂದ ಧನಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಹಾಗೂ ಆರೋಗ್ಯ ದೊರಕುತ್ತದೆ ಎನ್ನಲಾಗುತ್ತದೆ. ಆದರೆ ಈ ಪವಿತ್ರ ಗಿಡವನ್ನು ಪೂಜಿಸುವಾಗ ಅಥವಾ ಇಡುವಾಗ ಕೆಲವು ಎಚ್ಚರಿಕೆಗಳನ್ನು ತಪ್ಪದೇ ಪಾಲಿಸಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ತುಳಸಿ ಪೂಜೆ ಮಾಡುವಾಗ ಪಾಲಿಸಬೇಕಾದ ಎಚ್ಚರಿಕೆಗಳು

1. ತಪ್ಪು ದಿಕ್ಕಿಗೆ ತುಳಸಿ ಇಡಬಾರದು:
ವಾಸ್ತು ಪ್ರಕಾರ ತುಳಸಿ ಗಿಡವನ್ನು ಆಗ್ನೇಯ (ದಕ್ಷಿಣ ಪೂರ್ವ) ಅಥವಾ ವಾಯುವ್ಯ (ಉತ್ತರ ಪಶ್ಚಿಮ) ದಿಕ್ಕಿನಲ್ಲಿ ಇಡುವುದು ಉತ್ತಮ. ತಪ್ಪು ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷ ಉಂಟಾಗಿ ಆರ್ಥಿಕ ಸಮಸ್ಯೆಗಳು ಎದುರಾಗಬಹುದು.


2. ನೆಲದ ಮೇಲೆ ನೆಡಬಾರದು:
ತುಳಸಿಯನ್ನು ನೇರವಾಗಿ ನೆಲದ ಮೇಲೆ ನೆಡುವುದು ಅಶುಭ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಸಾಲು ಸಮಸ್ಯೆಗಳು ಮತ್ತು ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ತುಳಸಿಯನ್ನು ಪಾಟ್ ಅಥವಾ ಮಂಚದ ಮೇಲೆ ಇಡುವುದು ಉತ್ತಮ.


3. ಒಣಗಿದ ತುಳಸಿ ಎಚ್ಚರಿಕೆಯ ಸೂಚನೆ:
ಕೆಲವೊಮ್ಮೆ ಆರೈಕೆ ಮಾಡಿದರೂ ತುಳಸಿ ಒಣಗಿ ಹೋಗುತ್ತದೆ. ಇದನ್ನು ಕೆಟ್ಟ ಶಕ್ತಿಯ ಲಕ್ಷಣ ಎಂದು ನಂಬಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಗೆ ವಾಸ್ತು ದೋಷ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.


4. ಹನುಮಂತ ಪೂಜೆಯಲ್ಲಿ ತುಳಸಿ ಬಳಕೆ:
ಹನುಮಂತ ದೇವರ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸುವುದು ಅತ್ಯಂತ ಶುಭಕರ ಎಂದು ಶಾಸ್ತ್ರ ಹೇಳುತ್ತದೆ. ಇದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಎಂದು ನಂಬಿಕೆ ಇದೆ.

ತುಳಸಿ ಗಿಡವು ದೇವರ ಆಶೀರ್ವಾದದ ಸಂಕೇತ. ಅದನ್ನು ಸರಿಯಾದ ರೀತಿಯಲ್ಲಿ ಪೂಜಿಸಿ, ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿನ ಧನ, ಧಾನ್ಯ ಮತ್ತು ಶಾಂತಿ ಹೆಚ್ಚುತ್ತದೆ. ಆದರೆ ತಪ್ಪು ಕ್ರಮ ಪಾಲಿಸಿದರೆ ಬಡತನ ಮತ್ತು ಸಂಕಷ್ಟಗಳು ಎದುರಾಗಬಹುದು ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow