ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ?

ಅಕ್ಟೋಬರ್ 9, 2025 - 12:30
 0  12
ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ?

ನಮ್ಮಲ್ಲಿ ಬಂಗಾರ ಅಂದರೆ ಮುಗಿಯಿತು, ಅದರ ಮೇಲೆ ಒಂದು ರೀತಿಯ ಮುಗಿಯದ ಮೋಹ. ಇದನ್ನು ಸಂಪತ್ತಾಗಿ, ಆಭರಣವಾಗಿ, ಸ್ಟೇಟಸ್‌ ಆಗಿ, ಉಳಿತಾಯವಾಗಿ ನೋಡುತ್ತಾರೆ. ಇದರ ಬೇಡಿಕೆ ಬಂಗಾರದ ಬೆಲೆಯನ್ನು ಗಗನಕ್ಕೇರಿಸಿದೆ.

ಭಾರತದಲ್ಲಿ ಶುಭ ಸಮಾರಂಭಗಳಲ್ಲಿ ಸ್ವರ್ಣಾಭರಣದ ಕಳೆಯಿಲ್ಲದಿದ್ದರೆ ಎಲ್ಲವೂ ಸಪ್ಪೆ. ದರ ಎಷ್ಟೇ ಇದ್ದರೂ ಬಂಗಾರ ಕೊಳ್ಳೋದನ್ನು ಯಾರೂ ನಿಲ್ಲಿಸಲ್ಲ. ಅಷ್ಟರ ಮಟ್ಟಿಗೆ ಡಿಮ್ಯಾಂಡ್‌ ಇದೆ ಬಂಗಾರಕ್ಕೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದರ ವಿವರ ಈ ಸುದ್ದಿಯಲ್ಲಿದೆ.

 ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,588 ರೂಪಾಯಿಗೆ ಏರಿಕೆ ಆಗಿದ್ದು,ಇಂದು 93 ರುಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 85 ರೂಪಾಯಿ ಹೆಚ್ಚಳ ಆಗಿದ್ದು, 9,705 ರುಪಾಯಿಗೆ ಏರಿಕೆ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 930 ರೂ ಹೆಚ್ಚಳ ಆಗಿ, 1,05,880 ರುಪಾಯಿಗೆ ಏರಿಕೆ ಆಗಿದೆ.

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 850 ರೂ ಹೆಚ್ಚಳ ಆಗಿ 97,050 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,588 ರೂ ಇದೆ. ಬೆಳ್ಳಿಯ ಬೆಲೆ ಕೂಡಾ 1 ರೂ ಹೆಚ್ಚಳ ಆಗಿ. ,ಗ್ರಾಂ ಬೆಲೆ 126 ರೂ ಆಗಿದ್ದು, ಕೆಜಿ ಬೆಲೆ 1,26,000 ರೂ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow